ETV Bharat / state

ಹಾರ ತುರಾಯಿಯೊಂದಿಗೆ ಠಾಣೆಯಲ್ಲೇ ಹುಟ್ಟುಹಬ್ಬ ಆಚರಣೆ: ಪಿಎಸ್​ಐ ಅಮಾನತು - bankapura police station news

ಸರ್ಕಾರದ ನಿಯಮ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲಿಯೇ ಹಾರ ತುರಾಯಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಂಕಾಪುರ ಪೊಲೀಸ್ ಠಾಣೆಯ ಪಿಎಸ್ಐ ಅಮಾನತುಗೊಂಡಿದ್ದಾರೆ.

bankapura psi santhosh suspended news
ಹಾವೇರಿ ಎಸ್​​ಪಿ ಮಾಹಿತಿ
author img

By

Published : Aug 12, 2021, 7:00 PM IST

ಹಾವೇರಿ: ಪೊಲೀಸ್ ಠಾಣೆಯಲ್ಲಿ ಹಾರ ತುರಾಯಿಯೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಸಸ್ಪೆಂಡ್​ ಮಾಡಲಾಗಿದೆ.

bankapura psi santhosh suspended news
ಹಾರ ತುರಾಯಿಯೊಂದಿಗೆ ಠಾಣೆಯಲ್ಲೇ ಹುಟ್ಟುಹಬ್ಬ ಆಚರಣೆ

ಆಗಸ್ಟ್ 10 ರಂದು ಪಿಎಸ್ಐ ಸಂತೋಷ ಪಾಟೀಲ್, ಸ್ನೇಹಿತರು ಹಾಗೂ ಅತಿಥಿಗಳ ಜೊತೆ ಪೊಲೀಸ್ ಠಾಣೆಯಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ಕುರಿತ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸರ್ಕಾರದ ನಿಯಮ ಮತ್ತು ಪೊಲೀಸ್ ಉನ್ನತಾಧಿಕಾರಿಗಳ ಕಟ್ಟೆಚ್ಚರದ ನಡುವೆಯೂ ಈ ರೀತಿ ಜನ್ಮದಿನ ಆಚರಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ಇದನ್ನೂ ಓದಿ: ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾರ, ಹಣ್ಣಿನ ಬುಟ್ಟಿ, ಶಾಲು, ಕಾಣಿಕೆ ನೀಡಬಾರದು: ಸರ್ಕಾರದ ಸುತ್ತೋಲೆ

ಇದರ ಬೆನ್ನಲ್ಲೇ ಸಂತೋಷ ಕುಮಾರ್ ಪಾಟೀಲ್‌ ಸಸ್ಪೆಂಡ್​ ಮಾಡಿರುವುದಾಗಿ ಹಾವೇರಿ ಎಸ್​ಪಿ ಹನುಮಂತರಾಯ ತಿಳಿಸಿದ್ದಾರೆ. ಈ ಕುರಿತಂತೆ ಪೊಲೀಸ್ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಆದೇಶವಿದೆ. ಆದರೂ ಈ ರೀತಿ ಜನ್ಮದಿನ ಆಚರಿಸಿಕೊಂಡಿರುವುದು ತಪ್ಪು. ಈ ಕುರಿತಂತೆ ಇಲಾಖಾ ವಿಚಾರಣೆ ನಡೆಸುವುದಾಗಿ ಎಸ್​​ಪಿ ತಿಳಿಸಿದರು.

ಹಾವೇರಿ ಎಸ್​​ಪಿ ಮಾಹಿತಿ

ಇದನ್ನೂ ಓದಿ:ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಾರ, ತುರಾಯಿ ನಿಷೇಧ: ಪುಷ್ಪ ಬೆಳೆಗಾರರಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.