ETV Bharat / state

ಹಾವೇರಿಯ ಸರ್ಕಾರಿ ಶಾಲೆಯಲ್ಲಿದೆ ಬ್ಯಾಂಕ್: ಮಕ್ಕಳಿಗೆ ಸಿಗುತ್ತಿದೆ ವ್ಯವಹಾರ ಜ್ಞಾನ - ಈಟಿವಿ ಭಾರತ ಕನ್ನಡ

ಶಾಲೆಯಲ್ಲೊಂದು ಬ್ಯಾಂಕ್‌ ತೆರೆದರೆ ಹೇಗಿರುತ್ತೆ? ಶಾಲಾ ಮಕ್ಕಳಿಗೆ ಬ್ಯಾಂಕ್ ವ್ಯವಹಾರಗಳ ಜ್ಞಾನ ಸಿಕ್ಕರೆ ಹೇಗೆ? ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಇಂಥದ್ದೊಂದು ಪ್ರಯತ್ನ ನಡೆದಿದೆ.

Bammanakatti school
ಶಾಲೆಯಲ್ಲಿ ಬ್ಯಾಂಕ್​
author img

By

Published : Jan 12, 2023, 8:36 AM IST

Updated : Jan 12, 2023, 9:52 AM IST

ಹಾವೇರಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವ್ಯವಹಾರ ಜ್ಞಾನ ಹೆಚ್ಚಿಸಲು ಬ್ಯಾಂಕ್

ಹಾವೇರಿ: ಇಲ್ಲಿನ ಬಮ್ಮನಕಟ್ಟಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಶಿಕ್ಷಕರು ಮಕ್ಕಳಿಗಾಗಿ ಶಾಲೆಯಲ್ಲಿಯೇ ಬ್ಯಾಂಕ್​ ವ್ಯವಸ್ಥೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬ್ಯಾಂಕ್​ ವ್ಯವಹಾರದ ಜ್ಞಾನ ಸಿಗಲಿ ಎಂಬ ಕಾರಣಕ್ಕೆ ಸ್ಕೂಲ್​ ಬ್ಯಾಂಕ್​ ತೆರೆಯಲಾಗಿದೆ.

ಹಾವೇರಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಆಟ, ಪಾಠದ ಜೊತೆಗೆ ಸಾಮಾನ್ಯ ಜ್ಞಾನವನ್ನೂ ಶಿಕ್ಷಕರು ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕಲಿತ ಜ್ಞಾನ ಜೀವನದುದ್ದಕ್ಕೂ ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂಬುದು ಇದರ ಹಿಂದಿನ ಉದ್ದೇಶ. ಪ್ರಾಧ್ಯಾಪಕರ ಕಾರ್ಯಕ್ಕೆ ಶಾಲಾ ಸುಧಾರಣಾ ಸಮಿತಿ ಮತ್ತು ಗ್ರಾಮಸ್ಥರ ಒಪ್ಪಿಗೆಯೂ ಸಿಕ್ಕಿದೆ.

ವಿದ್ಯಾರ್ಥಿಗಳಿಗೆ ಬ್ಯಾಂಕ್​ ಖಾತೆ: ಈ ಶಾಲೆಯಲ್ಲಿ ಒಟ್ಟು 204 ವಿದ್ಯಾರ್ಥಿಗಳಿದ್ದಾರೆ. 80 ವಿದ್ಯಾರ್ಥಿಗಳು ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಖಾತೆ ಹೊಂದಿದ ಖಾತೆದಾರರಿಗೆ ಭಾವಚಿತ್ರ ಇರುವ ಪಾಸ್‌ಬುಕ್ ನೀಡಲಾಗಿದೆ. ಬ್ಯಾಂಕ್​ನಲ್ಲಿ ಶಾಲೆಯ ವಿದ್ಯಾರ್ಥಿಗಳೇ ಕ್ಯಾಷಿಯರ್ ಮತ್ತು ಮ್ಯಾನೇಜರ್ ಆಗಿದ್ದಾರೆ. ಪ್ರತಿ ಸೋಮವಾರ ಮತ್ತು ಗುರುವಾರ ಮಧ್ಯಾಹ್ನ 3.30 ರಿಂದ 4.30 ರವರೆಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ.

ಈ ಸಮಯದಲ್ಲಿ ವಿದ್ಯಾರ್ಥಿಗಳು ಹಣ ಕಟ್ಟುವುದಾಗಲೀ ಅಥವಾ ಹಣ ಬಿಡಿಸಿಕೊಳ್ಳುವ ಕೆಲಸ ಮಾಡುತ್ತಾರೆ. ತಮ್ಮ ತಂದೆ ತಾಯಿ ನೀಡಿದ ಹಣವನ್ನು ಬ್ಯಾಂಕ್‌ನಲ್ಲಿರಿಸಿ, ತಮಗೆ ಬೇಕಾದಾಗ ವಾಪಸ್​ ಪಡೆಯುತ್ತಾರೆ. ಸುಮಾರು 50 ಸಾವಿರ ರೂ.ಯಷ್ಟು ವ್ಯವಹಾರವನ್ನು ಬ್ಯಾಂಕ್ ಮಾಡುತ್ತಿದೆ. ಬ್ಯಾಂಕ್‌ನಲ್ಲಿ ಹಣ ಡಿಪಾಸಿಟ್ ಮತ್ತು ಕ್ಯಾಶ್​ ಪಡೆಯಲು ಬಳಸುವ ಅರ್ಜಿಗಳನ್ನೇ ಇಲ್ಲಿಯೂ ಬಳಸಲಾಗುತ್ತಿದೆ.

ಇದನ್ನೂ ಓದಿ: ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಕಲಬುರಗಿಯ ಹೈಟೆಕ್ ಅಂಗನವಾಡಿ: ಪುಟಾಣಿಗಳಿಗೆ ಕನ್ನಡ, ಇಂಗ್ಲಿಷ್​ ಪಾಠ

ಮಕ್ಕಳ ಜ್ಞಾನಾಭಿವೃದ್ಧಿಗೆ ಬ್ಯಾಂಕ್​ ಆರಂಭ: 'ಶಾಲೆಯಲ್ಲಿ ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪಠ್ಯ ವಿಷಯಗಳಲ್ಲಿ ಬ್ಯಾಂಕ್ ಬಗ್ಗೆ ಮಾಹಿತಿ ಇದೆ. ಇದಕ್ಕೂ ಮೊದಲು ಈ ಬ್ಯಾಂಕ್​ ಯಾವ ರೀತಿ ಕಾರ್ಯನಿರ್ವಹಿಸುತ್ತದೆ? ಎಂಬ ಕುತೂಹಲ ಮಕ್ಕಳಲ್ಲಿತ್ತು. ಕೆಲವು ವಿದ್ಯಾರ್ಥಿಗಳಿಗೆ ಬ್ಯಾಂಕ್​ಗೆ ಹೋದಾಗ ಅಲ್ಲಿನ ವ್ಯವಸ್ಥೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಇದನ್ನು ಮನಗಂಡ ನಾವು ಶಾಲೆಯಲ್ಲಿಯೇ ಬ್ಯಾಂಕ್​ ತೆರೆದಿದ್ದೇವೆ. ಇದು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ'.

'ವಿದ್ಯಾರ್ಥಿಗಳು ಇತ್ತೀಚೆಗೆ ಪ್ರವಾಸಕ್ಕೆ ಹೊರಟಾಗ ಇಲ್ಲಿ ಡೆಪಾಸಿಟ್​ ಮಾಡಿರುವ ಹಣವನ್ನೇ ಬಳಸಿದ್ದಾರೆ. ಇದರಿಂದ ಪೋಷಕರಿಗೂ ಹೆಚ್ಚಿನ ಹೊರೆ ಬೀಳುವುದಿಲ್ಲ. ಪೋಷಕರು ಹಣ ನೀಡಿದಾಗ ಈ ಹಿಂದೆ ಮಕ್ಕಳು ಕುರುಕಲು ತಿಂಡಿ ತಿನ್ನಲು ಬಳಸುತ್ತಿದ್ದರು. ಆದರೆ ಬ್ಯಾಂಕ್ ಆರಂಭವಾದಾಗಿನಿಂದ ವಿದ್ಯಾರ್ಥಿಗಳು ಈ ರೀತಿಯ ಹಣ ಪೋಲು ಮಾಡದೇ ಬ್ಯಾಂಕ್‌ನಲ್ಲಿ ಇಡುತ್ತಿದ್ದಾರೆ' ಎನ್ನುತ್ತಾರೆ ಶಿಕ್ಷಕರು.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಗೋಲ್​ಗುಂಬಜ್​ ಮಾದರಿಯ ವಿಶೇಷ ಅಂಗನವಾಡಿ ನಿರ್ಮಾಣ.. ಎಜಾಕ್ಸ್​ ಕಂಪನಿ ಸಹಕಾರ

Last Updated : Jan 12, 2023, 9:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.