ಹಾವೇರಿ: ನಗರದಲ್ಲಿರವ ಕೆಸಿಸಿ ಬ್ಯಾಂಕ್ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರೊಬ್ಬರು ಬ್ಯಾಂಕ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಕೆಸಿಸಿ ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನವಾಗಿ ಸಾಲ ನೀಡಬೇಕು. ಆದರೆ ಒಂದು ಸಂಘಕ್ಕೆ ಒಂದು ತರಹ, ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಆರೋಪಿಸಿದರು.
ಬಳಿಕ ಅವರೊಬ್ಬರೇ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.