ಹಾವೇರಿ: ಹಿರೇಕೆರೂರು ಕ್ಷೇತ್ರದಲ್ಲಿ ಉಪಚುನಾವಣಾ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಂತ್ರಗಳು ಚುರುಕಾಗಲಾರಂಭಿಸಿದೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಬ್ಬಿಣಕಂತಿಮಠದ ಶ್ರೀಗಳು ನಾಮಪತ್ರ ವಾಪಸ್ ಪಡೆದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿದ ಶ್ರೀಗಳು, ಬಿ.ಸಿ.ಪಾಟೀಲ್ ಜೊತೆ ಸಮಾಲೋಚನೆ ನಡೆಸಿದರು. ಇಂದಿನವರೆಗೆ ಕ್ಷೇತ್ರದಲ್ಲಿ ತಮ್ಮ ಮತ್ತು ಶ್ರೀಗಳ ನಡುವೆ ನಡೆದ ರಾಜಕೀಯ ವಿದ್ಯಮಾನಗಳನ್ನು ಮರೆತಿದ್ದೇನೆ. ನಾನು ಕಬ್ಬಿಣಕಂತಿಮಠದ ಭಕ್ತ ಹೀಗಾಗಿ ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ್ ಬಿ.ಸಿ.ಪಾಟೀಲ್‌ಗೆ ಸಾಥ್ ನೀಡಿದರು.