ಹಾನಗಲ್(ಹಾವೇರಿ): ಜಿಲ್ಲೆಯಲ್ಲಿ 'ಒಂದು ದೇಶ ಒಂದು ಕರೆ 112 ಪೈಲಟ್' ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ 112 ಹೆಲ್ಪ್ಲೈನ್ ಕರೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಈ ಕುರಿತಂತೆ ಜಾಗೃತಿ ಮೂಡಿಸಿದರು. ಹಾನಗಲ್ ನಗರದ ವಿವಿಧ ಜನಸಂದಣಿಯ ಪ್ರದೇಶಗಳಲ್ಲಿ ಈ ಕುರಿತಂತೆ ಅರಿವು ಮೂಡಿಸಲಾಯ್ತು.
ಈ ಹಿಂದೆ ಇದ್ದಂತೆ ಆರೋಗ್ಯ, ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಬೇರೆ ಬೇರೆ ನಂಬರ್ ಡಯಲ್ ಮಾಡುವುದು ಬೇಡ. 112 ನಂಬರ್ ಕರೆ ಮಾಡಿದರೆ ಸಾಕು ಕೆಲವೇ ಕೆಲವು ನಿಮಿಷಗಳಲ್ಲಿ ಈ ಸೇವೆಗಳು ತಮಗೆ ಸಿಗಲಿವೆ ಎಂದು ಸಿಪಿಐ ಶಿವಶಂಕರ್ ತಿಳಿಸಿದರು.