ಹಾವೇರಿ: ಜಿಲ್ಲೆಯಲ್ಲಿ ತುರ್ತುಸ್ಪಂದನ ಸಹಾಯ ವ್ಯವಸ್ಥೆ ಜಾರಿಗೆ ಹಾವೇರಿ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಹಾವೇರಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪೊಲೀಸ್ ಇಲಾಖೆ ಕೆಲಕಾಲ ಸಂಚಾರ ಬಂದ್ ಮಾಡಿ ಯೋಜನೆ ಕುರಿತಂತೆ ಸವಾರರಿಗೆ ತಿಳಿಸಿದರು.
ಮೊದಲಿನಂತೆ ಪೊಲೀಸ್ ಇಲಾಖೆಗೆ ಅಗ್ನಿಶಾಮಕದಳಕ್ಕೆ ಮತ್ತು ಅಂಬ್ಯುಲೆನ್ಸಗೆ ಪ್ರತ್ಯೇಕವಾಗಿ ಕರೆ ಮಾಡುವುದು ಬೇಡ. ಕೇವಲ 112 ನಂಬರ್‌ಗೆ ಕರೆ ಮಾಡಿದರೆ ಸಾಕು ಈ ಸೇವೆಗಳು ನೀವು ಕರೆ ಮಾಡಿದ ಸ್ಥಳಕ್ಕೆ ಕೆಲವೇ ಕೆಲವ ನಿಮೀಷಗಳಲ್ಲಿ ಬರಲಿವೆ ಎಂದು ತಿಳಿಸಿದರು.
ಈ ನಂಬರ್‌ನ್ನ ಎಲ್ಲರೂ ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಂಡು ತೊಂದರೆಯಾದಾಗ ಕರೆ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.