ರಾಣೆಬೆನ್ನೂರು: ಕಣ್ಣು ಇದ್ದು, ಎಲ್ಲವನ್ನೂ ತಿಳಿದ ಕೆಲವು ವಯಸ್ಕರು, ಹಿರಿಯರು ನಿತ್ಯವೂ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುತ್ತಾರೆ. ಆದರೆ, ದಿವ್ಯಾಂಗ ಮಕ್ಕಳು ಸಂಚಾರ ನಿಯಮಗಳು ಸಮಾಜಕ್ಕೆ ಎಷ್ಟು ಮುಖ್ಯ ಎಂಬುದನ್ನು ತಮ್ಮ ಜಾಥಾ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ನಗರದಲ್ಲಿರುವ ಸೇವಾ ಅಂಧರ ಸಂಸ್ಥೆ ಹಾಗೂ ರೇಣುಕಾ ಯಲ್ಲಮ್ಮದೇವಿ ಕಿವುಡ ಮತ್ತು ಅಂಧ ಶಾಲೆಯ ಮಕ್ಕಳು ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ನಡಸಿದರು. ನಗರದ ಎಂ.ಜಿ ರಸ್ತೆಯಲ್ಲಿ ದಿವ್ಯಾಂಗ ಮಕ್ಕಳು ವಾಹನ ಸವಾರರಿಗೆ ರಸ್ತೆ ಸುರಕ್ಷತಾ ಬಗ್ಗೆ ಘೋಷಣೆಗಳನ್ನು ಕೂಗಿ ತಿಳವಳಿಕೆ ಮೂಡಿಸಿದರು. ಈ ಜಾಥಾ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸಹಭಾಗಿತ್ವ ನೀಡಿ ಮಕ್ಕಳಿಗೆ ಮತ್ತಷ್ಟು ಬಲ ತುಂಬಿದರು.