ETV Bharat / state

ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ..

ಹೂವಿನಹಡಗಲಿ ತಾಲೂಕಿನ ಸುನೀತಾ ಸುರೇಶ್​ ಮಾಲ್ದಾರ ಎಂಬ ಮಹಿಳೆ ರಾಣೆಬೆನ್ನೂರು ನಗರಕ್ಕೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಆಟೋದಲ್ಲಿ ಆಕಸ್ಮಿಕವಾಗಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದಾರೆ. ಅದನ್ನು ಗಮನಿಸಿದ ಚಾಲಕ ಬಿದ್ದಾಡೆಪ್ಪ ಮೇಡ್ಲೆರಿ ಅವರು ಬ್ಯಾಗನ್ನು ನಗರದ ಶಹರ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

author img

By

Published : Oct 28, 2021, 9:05 PM IST

auto-driver-return-bag-to-woman-in-ranebennur
ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ

ರಾಣೆಬೆನ್ನೂರು: ಮಹಿಳೆಯೊಬ್ಬರು ಆಟೋದಲ್ಲಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದು, ಅದನ್ನು ಮತ್ತೆ ಅವರಿಗೆ ಮರಳಿಸುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಹೂವಿನಹಡಗಲಿ ತಾಲೂಕಿನ ಸುನೀತಾ ಸುರೇಶ್​ ಮಾಲ್ದಾರ ಎಂಬ ಮಹಿಳೆ ರಾಣೆಬೆನ್ನೂರು ನಗರಕ್ಕೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಆಟೋದಲ್ಲಿ ಆಕಸ್ಮಿಕವಾಗಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದಾರೆ. ಅದನ್ನು ಗಮನಿಸಿದ ಆಟೋ ಚಾಲಕ ಬಿದ್ದಾಡೆಪ್ಪ ಮೇಡ್ಲೆರಿ ಅವರು ಬ್ಯಾಗನ್ನು ನಗರದ ಶಹರ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

ನಂತರ ಪೊಲೀಸರು ಬ್ಯಾಗ್ ಪರಿಶೀಲಿಸಿದಾಗ ‌ಮಹಿಳೆಯ ಮಾಹಿತಿ ಸಿಕ್ಕಿದೆ. ತಕ್ಷಣವೇ ಅವರ ಕುಟುಂಬಕ್ಕೆ ಕರೆ ಮಾಡಿ ಬ್ಯಾಗ್​ನಲ್ಲಿದ್ದ 15 ಗ್ರಾಂ ಬಂಗಾರ ಹಾಗೂ ಹಣವಿದ್ದ ಬ್ಯಾಗನ್ನು ಪೊಲೀಸರ ಸಮ್ಮುಖದಲ್ಲಿ ಮರಳಿಸಿದ್ದಾರೆ.

ಆಟೋ ಚಾಲಕ ಬಿದ್ದಾಡೆಪ್ಪ ಮೇಡ್ಲೆರಿ ಅವರ ಮಾನವೀಯತೆಗೆ ರಾಣೆಬೆನ್ನೂರು ಪೊಲೀಸರು ಸೇರಿದಂತೆ ಮಹಿಳೆ ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಶಹರ ಠಾಣೆ ಸಿಬ್ಬಂದಿ ಕೃಷ್ಣಾರೆಡ್ಡಿ, ಬೀರಪ್ಪ ಪೂಜಾರ, ಸವೂರು, ಗಣೇಶ ಹಾಜರಿದ್ದರು.

ಓದಿ: ಬೆಂಗಳೂರು: ಪೊಲೀಸರ ಕಾರ್ಯಾಚರಣೆಯಿಂದ 57 ಭಿಕ್ಷುಕರಿಗೆ ಸಿಕ್ತು ಸೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.