ಹಾನಗಲ್: ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ಬೆಳಿಗ್ಗೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಕಾರ್ಯಾಚರಣೆ ನಡೆದಿದೆ.
ದಾಳಿ ವೇಳೆ ಸಂಗ್ರಹಿಸಿಟ್ಟಿದ್ದ ಒಂದು ಸಾವಿರ ಲೀಟರ್ ಕೊಳೆ ನಾಶಪಡಿಸಿದ್ದು, 500 ಲೀಟರ್‌ನಷ್ಟು ಸಾರಾಯಿ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಗ್ರಾಮದಲ್ಲಿನ ಮನೆ ಹಾಗೂ ಮನೆಯ ಹಿಂದಿನ ಜಮೀನಿನಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದರು.
ಹಾನಗಲ್ ಸಿಪಿಐ ಪ್ರವೀಣ ನೀಲಮ್ಮನವರ, ಆಡೂರ ಪಿ.ಎಸ್.ಐ ಆಂಜನೇಯ, ಹಾನಗಲ್ ಪಿ.ಎಸ್.ಐ ಮಂಜುನಾಥ, ಅಬಕಾರಿ ನಿರೀಕ್ಷಕ ಹೊನ್ನಪ್ಪ ನೇತೃತ್ವದಲ್ಲಿ ದಾಳಿಯಲ್ಲಿದ್ದರು.
ಅಬಕಾರಿ ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.