ಹಾವೇರಿ: ಸಮರ್ಪಕ ಬಸ್ಸಿಗೆ ಒತ್ತಾಯಿಸಿದ ವಿದ್ಯಾರ್ಥಿ ಜೊತೆ ಸಾರಿಗೆ ಸಹಾಯಕ ನಿಯಂತ್ರಕ ಅನುಚಿತವಾಗಿ ವರ್ತಿಸಿದ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇಲ್ಲಿಂದ ಮೇಲ್ಮುರಿ ಗ್ರಾಮಕ್ಕೆ ಬಿಡುವ ಬಸ್ ಸರಿಯಾದ ವೇಳೆಗೆ ಬರುವುದಿಲ್ಲ. ಇರುವುದೊಂದೇ ಬಸ್, ಅದು ಈ ರೀತಿಯಾದರೆ ಹೇಗೆ ಎಂದು ವಿದ್ಯಾರ್ಥಿಗಳು ಸಹಾಯಕ ನಿಯಂತ್ರಕನನ್ನು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಹಾಯಕ ನಿಯಂತ್ರಕ, ಅವಾಚ್ಯ ಶಬ್ಧಗಳಿಂದ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಹಾಯಕ ನಿಯಂತ್ರಕ, ವಿದ್ಯಾರ್ಥಿಗೆ ನಿನ್ನ ವಯಸ್ಸಿನ ಮೊಮ್ಮಗ ನನಗಿದ್ದಾನೆ ಹೆಚ್ಚಿಗೆ ಮಾತನಾಡಬೇಡ ಎಂದು ತಾಕೀತು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸಹಾಯಕ ನಿಯಂತ್ರಕನ ಜೊತೆ ವಾಗ್ವಾದ ನಡೆಸಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಮಧ್ಯಸ್ಥಿಕೆ ವಹಿಸಿ ವಿದ್ಯಾರ್ಥಿಗಳನ್ನ ಸಮಾಧಾನ ಪಡಿಸಿದ್ದಾರೆ.