ETV Bharat / state

ತಿಂಗಳಿಗೆ 12 ಸಾವಿರ ರೂಪಾಯಿ ವೇತನ ನೀಡಿ; ಆಶಾ ಕಾರ್ಯಕರ್ತೆಯರ ಮನವಿ! - ಹಾವೇರಿ ಸುದ್ದಿ

ತಿಂಗಳಿಗೆ 12 ಸಾವಿರ ರೂಪಾಯಿ ವೇತನ ನೀಡುವಂತೆ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಲ್ಲದೆ, ಸೂಕ್ತ ರಕ್ಷಣಾ ಸಾಮಗ್ರಿ ವಿತರಿಸುವಂತೆ ಹಾವೇರಿ ಪೌರಾಯುಕ್ತರ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.

Asha workers
ಆಶಾ ಕಾರ್ಯಕರ್ತೆಯರ ಮನವಿ
author img

By

Published : Jul 13, 2020, 8:28 PM IST

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರು ದಿನ ಪೂರೈಸಿದೆ. ಮೂರನೇ ದಿನವಾದ ಇಂದು ಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರ ತಮಗೆ ತಿಂಗಳಿಗೆ 12 ಸಾವಿರ ರೂಪಾಯಿ ವೇತನ ನೀಡುವಂತೆ ಒತ್ತಾಯಿಸಿದರು. ಅಲ್ಲದೆ ಕೊರೊನಾ ತಡೆಯುವಲ್ಲಿ ತಮ್ಮ ಪಾತ್ರ ಮಹತ್ತರವಾಗಿದ್ದು, ಸೂಕ್ತ ರಕ್ಷಣಾ ಸಾಮಗ್ರಿ ವಿತರಿಸುವಂತೆ ಮನವಿ ಮಾಡಿದರು. ಕಳೆದ ಮೂರು ದಿನಗಳಿಂದ ರಾಜ್ಯದಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.