ಹಾವೇರಿ: ಬೀಗ ಹಾಕಿದ ಮನೆಗಳನ್ನ ಹಾಡು ಹಗಲೆ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹಾವೇರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೂಲತಃ ಕಲಬುರಗಿ ಜಿಲ್ಲೆಯ ಬಾಪುನಗರದ 30 ವರ್ಷದ ಜಯಶ್ರೀ ಕನ್ವರ್ ಉಪಾದ್ಯ ಎಂದು ಗುರುತಿಸಲಾಗಿದೆ. ಆರೋಪಿಯು ಹಾವೇರಿ ನಗರದ ಅಶ್ವಿನಿ ನಗರ, ಸೇರಿದಂತೆ ನಾಲ್ಕು ಮನೆಗಳನ್ನ ಕಳ್ಳತನ ಮಾಡಿದ್ದಾಳೆ ಎನ್ನಲಾಗಿದೆ.
ಬಂಧಿತಳಿಂದ 3,43,500 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಗಲಿನಲ್ಲಿ ಪ್ಲಾಸ್ಟಿಕ್ ಆಯುವ ವೇಷದಲ್ಲಿ ಬರುತ್ತಿದ್ದ ಈ ಆರೋಪಿ ಕಬ್ಬಿಣದ ರಾಡು ಉಪಯೋಗಿಸಿ ಕೆಲವೇ ನಿಮಿಷದಲ್ಲಿ ಕಳ್ಳತನ ಮಾಡುತ್ತಿದ್ದಳು ಎನ್ನಲಾಗಿದೆ.
ಹಾವೇರಿ ನಗರಠಾಣೆಯ ಸಿಪಿಐ ಪ್ರಭಾವತಿ ಶೇತಸನದಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.