ಹಾವೇರಿ : ಬಿಜೆಪಿ ದುಷ್ಟನೀತಿಯಿಂದ ಹೈನುಗಾರಿಕೆಗೆ ಹೊಡೆತ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸುತ್ತಾರೆ. ಆದರೆ ಅವರು ಎಲ್ಲವನ್ನ ತಿಳಿದುಕೊಂಡು ಆರೋಪ ಮಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ. ಹಾವೇರಿ ಸಮೀಪದ ಜಂಗಮನಕೊಪ್ಪದಲ್ಲಿ ಯು ಹೆಚ್ ಟಿ ಘಟಕ ಉದ್ಘಾಟಿಸಿ ಅವರು ಮಾತನಾಡಿದ ಅವರು, ಎಲ್ಲದಕ್ಕೂ ರಾಜಕಾರಣ ತಂದು ರೈತಾಪಿ ವರ್ಗದ ಜನರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು. ರೈತರ ಶ್ರಮಕ್ಕೆ ಅಭಿನಂದನೆ ಸಲ್ಲಿಸಬೇಕು. ನೀವು ನೋಡುವ ದೃಷ್ಠಿಯಲ್ಲಿ ದುಷ್ಟತೆ ಇದೆ ಹೊರತು ನಮ್ಮ ನೀತಿಯಲ್ಲಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಹಾವೇರಿಯಲ್ಲಿ ಪಶು ಆಹಾರ ಉತ್ಪಾದನೆಯ ಘಟಕ ಸಹ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಚರ್ಮ ಗಂಟು ರೋಗದಿಂದ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಇಳಿಕೆಯಾಗಿರುವ ಹಾಲು ಉತ್ಪಾದನೆ ಏರಿಕೆ ಮಾಡುವ ಕಡೆ ಗಮನ ಹರಿಸುವುದಾಗಿ ಸಿಎಂ ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ತಿಂಗಳಲ್ಲಿ ರೈತರು ಹಾಲು ಒಕ್ಕೂಟಕ್ಕೆ ಹಾಕಿದ್ದ ಹಾಲಿನ ಹಣ ಮೂರು ತಿಂಗಳು ಆರು ತಿಂಗಳಾದರೂ ಸಿಗುತ್ತಿರಲಿಲ್ಲ. ಇದು ಅವರ ಆಡಳಿತ ವ್ಯವಸ್ಥೆ. ಹಾಲು ಒಕ್ಕೂಟಗಳು ದಿವಾಳಿಯಾಗಿದ್ದವು. ಇವತ್ತು ಚೇತರಿಕೆ ಕಂಡು ಎಂಟತ್ತು ದಿನದಲ್ಲಿ ರೈತರಿಗೆ ಹಣ ನೀಡುತ್ತಿವೆ ಎಂದರು.
ಒಕ್ಕೂಟಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ ಅದಕ್ಕಿಂತ ಹೆಚ್ಚು ಹಣ ಸಹ ನೀಡುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದರಿಂದ ಇಲ್ಲಿ ಸಂಸ್ಕರಣ ಘಟಕ ಆರಂಭವಾಗಬೇಕು ಎಂದು ಈ ಘಟಕ ಆರಂಭಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ಜಿಲ್ಲೆಯ ಹಾಲು ಒಕ್ಕೂಟ ಉದ್ಘಾಟನೆ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಏಳು ಲೇಹರ್‌ನ 6 ತಿಂಗಳು ಕೆಡದಂತೆ ಹಾಲಿನ ಪ್ಯಾಕೇಟ್ ಆರಂಭಿಸಲಾಗಿದೆ. ಇದು ರಾಜ್ಯದಲ್ಲಿ ಅತ್ಯುತ್ತಮವಾದ ಯುನಿಟ್ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ರಾಷ್ಟ್ರದಲ್ಲಿ ಇರದ ತಂತ್ರಜ್ಞಾನವನ್ನ ಇಲ್ಲಿ ಬಳಸಲಾಗಿದೆ. ಕ್ಷೀರಕ್ರಾಂತಿ ಹಾವೇರಿಯಲ್ಲಾಗಬೇಕು, ಇಲ್ಲಿ ಪ್ರತಿದಿನ ಮೂರು ಲಕ್ಷ ಲೀಟರ್ ಹಾಲು ಸಂಸ್ಕರಿಸುವಂತಾಗಬೇಕು. ರೈತರ ಆದಾಯ ಹೆಚ್ಚಾಗಬೇಕು. ಅದನ್ನ ವ್ಯವಸ್ಥಿತವಾಗಿ ಮಾಡುವುದು ಹೈನುಗಾರಿಕೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ವಾಗ್ದಾಳಿ: ರೈತರು ಇಂತಹ ಘಟಕಗಳಿಂದ ಹೆಚ್ಚಿನ ಆದಾಯ ಪಡೆಯಬೇಕು. ದನಕರುಗಳಿಗೆ ಚರ್ಮ ಗಂಟುರೋಗ ಬಂದಿದ್ದರಿಂದ ಪ್ರಸ್ತುತ ವರ್ಷ 50 ಸಾವಿರ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು. ಇಲ್ಲಿ ಉತ್ಪಾದನೆಯಾಗುವ ಹಾಲನ್ನು ಸಂಸ್ಕರಿಸಿ ಪ್ಯಾಕೇಟ್ ಮಾಡಲಾಗುತ್ತಿದೆ. ಹಾಲು ನೀಡುವ ಆಕಳುಗಳು ಕಾಮಧೇನು ಎನ್ನುತ್ತಿವೆ. ನಿಜವಾಗಲೂ ಕೂಡ ಕಾಮಧೇನಾಗಿ ರೈತರ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಂದು ಆಕಳು ಕಟ್ಟಿದರೆ ಒಂದು ಮನೆ ನಡೆಯುತ್ತೆ ಎಂಬ ಮಾತಿದೆ. ಒಂದು ಆರೋಗ್ಯಕರ ಸ್ವಾಸ್ಥ ಸಮಾಜಕ್ಕೆ ಹಾಲು ಅವಶ್ಯಕ ಎಂದು ಕ್ಷೀರಕ್ರಾಂತಿ ಪಿತಾಮಹ ವರ್ಗಿಸ್ ಕುರಿಯನ್ ಈ ಹಿಂದೆ ತಿಳಿಸಿದ್ದಾರೆ.
ವರ್ಗಿಸ್ ಕುರಿಯನ್ ಗುಜರಾತಿನಲ್ಲಿ ಒಂದು ಹಾಲು ಒಕ್ಕೂಟ ಮಾಡಿ ದೊಡ್ಡ ಸಾಧನೆ ಮಾಡಿದ್ದಾರೆ. ಖಾಸಗಿಯಾಗಿ ಮಾಡಬೇಕಾದ ಸಾಧನೆಯನ್ನ ಖಾಸಗಿ ಕೋ - ಆಪರೇಟಿವ್ ಸೊಸೈಟಿಯಲ್ಲಿ ಆರಂಭಿಸಿರುವುದು ವರ್ಗಿಸ್ ಕುರಿಯನ್ ಮಾಡಿರುವ ಮಹಾಕಾರ್ಯ. ಅದಕ್ಕೆ ಅವರಿಗೆ ನಮನ ಸಲ್ಲಿಸುವುದಾಗಿ ಬಸವರಾಜ್ ಬೊಮ್ಮಾಯಿ ನಮನ ಸಲ್ಲಿಸಿದರು.
ಗುಜರಾತ್ನಲ್ಲಿ ಅಮೂಲ್ನಂತಹ ದೊಡ್ಡ ಬದಲಾವಣೆಯಾಗಿದೆ: ಮೊದಲು ಎಮ್ಮೆ ಆಕಳುಗಳನ್ನು ಮನೆಯ ಜನರಿಗೆ ಹಾಲು ಕುಡಿಯುವುದಕ್ಕಾಗಿ ಸಾಕಲಾಗುತ್ತಿತ್ತು. ಗುಜರಾತಿ ಅಮೂಲ್ ನಂತಹ ದೊಡ್ಡ ಬದಲಾವಣೆಯಾಗಿದ್ದು ನಂದಿನಿ ಎಂದು ಬೊಮ್ಮಾಯಿ ತಿಳಿಸಿದರು. ನಂದಿನಿ ರಾಜ್ಯದ ಎಲ್ಲ ಜನರಿಗೆ ಕಾಮಧೇನುವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಒಂದು ಕಾಲದಲ್ಲಿ ಉತ್ತರಕರ್ನಾಟಕದ ಹಾಲು ಒಕ್ಕೂಟಗಳು ಕ್ಷೀಣ ಪರಿಸ್ಥಿತಿಯಲ್ಲಿದ್ದವು. ನಮ್ಮನ್ನ ಪ್ರತಿನಿಧಿಸುವವರು ಸರಿಯಾಗಿಲ್ಲ ಎಂದರೆ ಏನಾಗುತ್ತೆ ಎಂಬುವುದಕ್ಕೆ ಇದೊಂದು ಉದಾಹರಣೆ. ದಕ್ಷಿಣ ಕರ್ನಾಟಕದ ಒಕ್ಕೂಟಗಳಿಗೆ ಗ್ರ್ಯಾಂಟ್ ಉತ್ತರಕರ್ನಾಟಕದ ಒಕ್ಕೂಟಗಳು ಸಾಲದಲ್ಲಿದ್ದವು. ಅಧಿಕಾರಿಗಳ ವಿರೋಧದಲ್ಲಿ 2010- 11 ರಲ್ಲಿ ಅಧಿಕಾರಿಗಳ ವಿರೋಧದ ನಡುವೆ ಸಹ ಗುಜರಾತ್ನ ಎನ್‌ಡಿಎಂ ಡೈರಿ ಜೊತೆ ಮಾತನಾಡಿ 27 ಕೋಟಿ ರೂಪಾಯಿ ನೀಡಿ ಹಾಲು ಒಕ್ಕೂಟಗಳ 100 ಕೋಟಿ ಸಾಲ ಮನ್ನಾ ಮಾಡಿಸಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಹಾಲು ಒಕ್ಕೂಟ ಮಾಡಲಾಗುವುದು-ಸಿಎಂ: ವಯಸ್ಸಾದ ಆಕಳುಗಳ ರಕ್ಷಣೆಗಾಗಿ ಗೋಶಾಲೆ ಆರಂಭಮಾಡಿದ್ದೇವೆ. ಪುಣ್ಯಕೋಟಿ ದತ್ತು ಕಾರ್ಯಕ್ರಮದ ಮೂಲಕ ಗೋಶಾಲೆಗಳಲ್ಲಿರುವ ಹಸುಗಳ ದತ್ತು ಪಡೆಯಲಾಗುತ್ತದೆ. ಪುಣ್ಯಕೋಟಿ ದತ್ತು ಕಾರ್ಯಕ್ರಮದಲ್ಲಿ 43 ಕೋಟಿ ರೂಪಾಯಿ ಸೇರಿದೆ. ಇನ್ನೊಂದು ವಾರದಲ್ಲಿ ಎಲ್ಲ ಗೋಶಾಲೆಗಳಿಗೆ 30 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ. ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಹಾವೇರಿ ಜಿಲ್ಲೆಯ ರೈತರು ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಹಾಲು ಒಕ್ಕೂಟ ಮಾಡುವುದಾಗಿ ಸಿಎಂ ತಿಳಿಸಿದರು.
ಇದನ್ನೂ ಓದಿ : ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ