ETV Bharat / state

ರಸ್ತೆ ಕಾಮಗಾರಿ ಮಾಡಿದ ಮೂರು ದಿನದಲ್ಲೇ ಕಿತ್ತು ಬರುತ್ತಿದೆ ಡಾಂಬರು.. ಜನರ ಆತಂಕ - ಕೈಯ್ಯಲ್ಲೇ ಕಿತ್ತು ಬರುವ ಡಾಂಬರು

500 ಮೀಟರ್​ ರಸ್ತೆ ಮಾಡಿ ಗುತ್ತಿಗೆದಾರ ಕಾಲ್ಕಿತ್ತಿದ್ದಾನೆ. ಇತ್ತ ತಮ್ಮ ಗ್ರಾಮಕ್ಕೆ ಒಳ್ಳೆ ರಸ್ತೆಯಾಗಿ, ಸಾರಿಗೆ ಬಸ್​ ಪುನಾರಂಭ ಆಗುತ್ತದೆ. ಮಕ್ಕಳು ಬಸ್ಸಲ್ಲಿ ಶಾಲೆಗೆ ಹೋಗಬಹುದು ಎಂದುಕೊಂಡಿದ್ದ ಗ್ರಾಮಸ್ಥರ ಕನಸು ಕನಸಾಗಿಯೇ ಉಳಿದಿದೆ.

poor-road-work-of-hosaritthi-and-akkuru
http://10.10.50.85:6060///finalout4/karnataka-nle/finalout/15-May-2022/15292019_hvr-2win.mp4
author img

By

Published : May 15, 2022, 6:03 PM IST

ಹಾವೇರಿ: ಹಾವೇರಿ ತಾಲೂಕು ಹೊಸರಿತ್ತಿ ಪಟ್ಟಣದಿಂದ ಮೂರು ಕಿಲೋ ಮೀಟರ್​ ದೂರದಲ್ಲಿ ಅಕ್ಕೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಗ್ರಾಮಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮೇಲೆ ಮನವಿ ಸಲ್ಲಿಸಿ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿದ್ದರು. ಇದರ ಪರಿಣಾಮ ಹೊಸರಿತ್ತಿಯಿಂದ ಅಕ್ಕೂರು ಗ್ರಾಮ ಸಂಪರ್ಕಿಸುವ ಮೂರು ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಆ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿದ್ದಾರೆ.

ಹೊಸರಿತ್ತಿಯಿಂದ ಅಕ್ಕೂರಿನವರೆಗೆ ಗುತ್ತಿಗೆದಾರರು ರಸ್ತೆಗೆ ಡಾಂಬರು ಕಾಮಗಾರಿ ನೆರವೇರಿಸಿದ್ದಾರೆ. ಕಳಪೆ ಕಾಮಗಾರಿಗೆ ಕೋಪಗೊಂಡಿರುವ ಜನರು ಗುತ್ತಿಗೆದಾರರು ಸರಿಯಾದ ಪ್ರಮಾಣದಲ್ಲಿ ಡಾಂಬರು ಬಳಸಿಲ್ಲಾ ಎಂದು ದೂರಿದ್ದಾರೆ. ಈ ಹಿಂದೆ ಇದ್ದ ರಸ್ತೆ ಮೇಲಿನ ದೂಳು ಕೂಡ ತೆಗೆಯದೆ ಅದರ ಮೇಲೆಯೇ ಡಾಂಬರು ಹಾಕಿದ್ದಾರೆ. ಹೀಗಾಗಿ ಡಾಂಬರು ಕೈಯಿಂದ ಕಿತ್ತರೆ ಕಿತ್ತು ಬರುತ್ತಿದೆ ಎನ್ನುತ್ತಿದ್ದಾರೆ.

ಡಾಂಬರೀಕರಣ ಮಾಡಿದ ಮೂರೇ ದಿನಗಳಲ್ಲಿ ಈ ರೀತಿಯಾದರೆ ಮಳೆಗಾಲದಲ್ಲಿ ರಸ್ತೆ ಹೇಗೆ ಇರಬಹುದು ಎಂದು ಊಹಿಸಿಕೊಳ್ಳಿ ಅಂತಿದ್ದಾರೆ ಸ್ಥಳೀಯರು. ಡಾಂಬರೀಕರಣದ ವೇಳೆ ಕೆಲಸಗಾರರನ್ನು ಕೇಳಿದರೆ ಡಾಂಬರು ಹಾಕಿದ ನಂತರ ಹೀಟ್ ಮಾಡಿದ ಮೇಲೆ ರಸ್ತೆ ಸರಿಯಾಗುತ್ತದೆ ಎಂದು ತಿಳಿಸಿದ್ದರು. ಆದರೆ ಹೀಟ್ ಮಾಡಿದರೂ ಸಹ ಡಾಂಬರು ಕಿತ್ತುಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿ ಕಳಪೆ ಆರೋಪ

ಕಾಮಗಾರಿ ಕಳಪೆಯಾಗಿದ್ದು, ಮೂರು ಕಿ.ಮೀ. ರಸ್ತೆ ಕಾಮಗಾರಿಗೆ ಸ್ಥಳೀಯರು ತಡೆವೊಡ್ಡಿದ್ದಾರೆ. ಗುತ್ತಿಗೆದಾರ ಕೇವಲ 500 ಮೀಟರ್ ರಸ್ತೆ ಮಾಡಿ ಕಾಲ್ಕಿತ್ತಿದ್ದಾನೆ. ಇದೀಗ ಗ್ರಾಮಸ್ಥರು ಗುಣಮಟ್ಟದ ರಸ್ತೆ ಮಾಡುವುದಿದ್ದರೆ ಮಾಡಿ, ಇಲ್ಲದಿದ್ದರೆ ಬೇಡ ಎನ್ನುತ್ತಿದ್ದಾರೆ. ಅಕ್ಕೂರು ಗ್ರಾಮ ಹಲವು ವರ್ಷಗಳಿಂದ ಸಮರ್ಪಕ ರಸ್ತೆಯಿಂದ ವಂಚಿತವಾಗಿದೆ.

ರಸ್ತೆ ಸರಿಯಾಗಿ ಇಲ್ಲದ ಕಾರಣ ಗ್ರಾಮಕ್ಕೆ ಇದ್ದ ಸಾರಿಗೆ ಬಸ್ ಸಂಚಾರ ಸಹ ನಿಂತಿದೆ. ಗ್ರಾಮದ ಮಕ್ಕಳು ಹೊಸರಿತ್ತಿವರೆಗೆ ನಡೆದು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಸಮರ್ಪಕ ರಸ್ತೆಯಾಗುತ್ತದೆ. ತಮ್ಮ ಊರಿಗೆ ಬಸ್ ಬರುತ್ತದೆ ಎಂದು ಕನಸು ಕಂಡಿದ್ದ ಗ್ರಾಮಸ್ಥರು ಕಳಪೆ ಕಾಮಗಾರಿಯಿಂದ ಬೇಸತ್ತಿದ್ದಾರೆ. ತಮಗೆ ತಡವಾದರೂ ಪರವಾಗಿಲ್ಲ ಗುಣಮಟ್ಟದ ರಸ್ತೆ ನಿರ್ಮಿಸಿ, ನಮ್ಮ ಕನಸು ನನಸು ಮಾಡಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋಟಿಗಟ್ಟಲೆ ಹಣ ವ್ಯಯಿಸುವ ಗೋಳಿತೊಟ್ಟು ಕೊಕ್ಕಡ ರಸ್ತೆಯ ಕಾಮಗಾರಿ ಕಳಪೆ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.