ಹಾವೇರಿ: ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋರು ಕೊರೊನಾ ವೈರಸ್ ಇದ್ದಂತೆ. ದೇಶ ವಿರೋಧಿ ಘೋಷಣೆ ಕೂಗುವವರಿಗೆ ಗುಂಡಿಕ್ಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ನಮ್ಮ ದೇಶದ ಅನ್ನ, ಗಾಳಿ, ನೀರು ಕುಡಿದು ದೇಶ ವಿರೋಧಿ ಘೋಷಣೆ ಕೂಗೋರನ್ನ ಹಾಗೆಯೇ ಬಿಡಬಾರದು. ಕಂಡಲ್ಲಿ ಗುಂಡಿಕ್ಕಿ ಸಾಯಿಸೋ ಕಾನೂನು ತರಬೇಕೆಂದು ಪ್ರಧಾನಿಗಳನ್ನ ಒತ್ತಾಯಿಸುತ್ತೇನೆ ಎಂದರು. ಇನ್ನು ದೊರೆಸ್ವಾಮಿ ಮತ್ತು ಯತ್ನಾಳ್ ಎಂಬ ಎರಡು ಮದ್ದಾನೆಗಳ ಗುದ್ದಾಟದಲ್ಲಿ ನಾನ್ಯಾಕೆ ಗುಬ್ಬಿಯಾಗಲಿ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಷಯದ ಬಗ್ಗೆ ಟೀಕೆ ಮತ್ತು ಸಮರ್ಥನೆ ಮಾಡಿಕೊಳ್ಳೋದು ಸರಿಯಲ್ಲ ಎಂದರು.
ಮಹದಾಯಿ ವಿಚಾರದಲ್ಲಿ ಸಂತೋಷವಾಗಿದೆ. ಉತ್ತರ ಕರ್ನಾಟಕದ ಜನತೆಗೆ, ಮಹದಾಯಿ ಹೋರಾಟಗಾರರಿಗೆ ದೊಡ್ಡ ನಮಸ್ಕಾರ ಎಂದು ಸಚಿವ ಪಾಟೀಲ್ ಸಂತೋಷ ವ್ಯಕ್ತಪಡಿಸಿದರು.