ETV Bharat / state

ಹಾವೇರಿ: ದೇವಸ್ಥಾನ ಅಪವಿತ್ರಗೊಳಿಸಿದ ಆರೋಪಿ ಬಂಧನ - haveri temple wall urinated case

ದೇವಸ್ಥಾನ ಅಪವಿತ್ರಗೊಳಿಸಿದ ಕಿಡಿಗೇಡಿ- ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ- ಆರೋಪಿ ಬಂಧನ

accused-arrested-for misbehavior in-temple-at-haveri
ಹಾವೇರಿ: ದೇವಸ್ಥಾನ ಅಪವಿತ್ರಗೊಳಿಸಿದ ಆರೋಪಿ ಬಂಧನ
author img

By

Published : Jul 25, 2022, 1:05 PM IST

Updated : Jul 25, 2022, 1:26 PM IST

ಹಾವೇರಿ: ದೇವಸ್ಥಾನದ ಆವರಣ ಅಪವಿತ್ರಗೊಳಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಿದ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭಾನುವಾರ ಸಂಜೆ ಘಟನೆ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಮಲಗಿ ಎದ್ದು ಬಳಿಕ ಸ್ಥಳ ಅಪವಿತ್ರಗೊಳಿಸಿದ್ದಾನೆ. ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಯುವಕನ ಕೃತ್ಯ ಸೆರೆಯಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಒತ್ತಾಯಿಸಿದರು.

ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಗುತ್ತಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಣ್ಣನ್ನು ಬಳಸಿ ನಕಲಿ ರಸಗೊಬ್ಬರ ತಯಾರಿಕೆ.. ಮೈಸೂರಲ್ಲಿ ಬಯಲಾಯ್ತು ದುಷ್ಕೃತ್ಯ

Last Updated : Jul 25, 2022, 1:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.