ETV Bharat / state

ಇನಿಯನನ್ನು ಕೊಲೆ ಮಾಡಿ ಬಿಸಾಕಿದ ಪ್ರಿಯತಮೆ : ಪೊಲೀಸರು ಬಿಡ್ತಾರಾ, ಆಕೆ ಕೈಗೆ ಕೋಳ ಬಿತ್ತು

ಶೋಭಾ ಲಾರಿ ಚಾಲಕನಿಗೆ ಯಾವುದೇ ಸಂಶಯ ಬರದಂತೆ ಕೊಲೆ ಮತ್ತು ಶವ ಸಾಗಾಟ ಮಾಡಿದ್ದಾಳೆ. ಆಗಸ್ಟ್​ 8ರಂದು ಬ್ಯಾಡಗಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿ ಸಾವನ್ನಪ್ಪಿರುವ ವಿಷಯ ತಿಳಿದು ಬರುತ್ತದೆ. ಪೊಲೀಸರು ಆಗಸ್ಟ್‌ 8ರಂದು ಅಸ್ವಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಾರೆ. ಪ್ರಕರಣ ಜಾಡು ಹಿಡಿದು ವಿಚಾರಿಸಿದಾಗ ಆರೋಪಿ ಶೋಭಾ ಕೊಲೆ ಮಾಡಿರುವ ಅಂಶ ಬೆಳಕಿಗೆ ಬರುತ್ತದೆ..

a-woman-killed-her-lover-in-haveri
ಇನಿಯನನ್ನು ಕೊಲೆ ಮಾಡಿ ಬಿಸಾಕಿಹೋದ ಪ್ರಿಯತಮೆ
author img

By

Published : Aug 13, 2021, 9:18 PM IST

Updated : Aug 13, 2021, 9:48 PM IST

ಹಾವೇರಿ : ಇಬ್ಬರು ಗಂಡಂದಿರು, ಓರ್ವ ಮಗಳನ್ನು ಹೊಂದಿರುವ ಪ್ರಿಯತಮೆಯೇ ಪ್ರಿಯಕರನನ್ನ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಜರುಗಿದೆ. ನಾಗರಾಜ್ ಮಣ್ಣಿಕೇರಿ (28) ಕೊಲೆಯಾದ ಯುವಕ. ಶೋಭಾ ಅಲಿಯಾಸ್​ ಯಲ್ಲವ್ವ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಶೋಭಾಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿ ಒಂದು ಹೆಣ್ಣು ಮಗು ಕೂಡ ಇತ್ತು. ಮೊದಲ ಗಂಡನನ್ನು ತೊರೆದ ಈಕೆ ಎರಡನೇ ಮದುವೆಯಾಗುತ್ತಾಳೆ. ನಂತರ ಶೋಭಾಳ 2ನೇ ಪತಿ ಆಕೆಯ ಮಗಳ ಮೇಲೆಯೇ ಅತ್ಯಾಚಾರ ಮಾಡಿ ಜೈಲು ಪಾಲಾಗುತ್ತಾನೆ.

ಈ ಮಧ್ಯೆ ಶೋಭಾಗೆ ನಾಗರಾಜ್ ಪರಿಚಯವಾಗಿದೆ. ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದೆ. ಈ ನಡುವೆ ನಾಗರಾಜ್​ಗೆ ಬೇರೆ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಇದನ್ನು ಸಹಿಸದ ಶೋಭಾ, ನಾಗರಾಜ್‌ಗೆ ತನ್ನನ್ನೇ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಾಳೆ.

ಈ ಗಲಾಟೆ ನಡುವೆಯೇ ನಾಗರಾಜ್​ ಹಾಗೂ ಶೋಭಾ ಹುಬ್ಬಳ್ಳಿಯಿಂದ ಬ್ಯಾಡಗಿಗೆ ಬರುವ ಲಾರಿ ಹತ್ತಿದ್ದಾರೆ. ಲಾರಿ ಬಂಕಾಪುರ ಬಳಿ ಬಂದಾಗ ಚಾಲಕ ಊಟಕ್ಕೆ ಇಳಿದಿದ್ದಾನೆ. ಈ ವೇಳೆ ನಾಗರಾಜ್ ಶೋಭಾಳ ಕುತ್ತಿಗೆ ಹಿಚುಕಲು ಮುಂದಾಗಿದ್ದ ಎನ್ನಲಾಗಿದೆ. ಆದರೆ, ಶೋಭಾ ತನ್ನ ವೇಲಿನಿಂದ ನಾಗರಾಜನ ಕುತ್ತಿಗೆ ಬಿಗಿದು ಕೊಲೆ ಕೊಲೆ ಮಾಡಿದ್ದಾಳೆ.

ಇನಿಯನನ್ನು ಕೊಲೆ ಮಾಡಿ ಬಿಸಾಡಿ ಹೋದ ಪ್ರಿಯತಮೆ

ಲಾರಿ ಚಾಲಕ ಊಟ ಮಾಡಿ ಬರುವಷ್ಟರಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಊಟ ಮಾಡಿ ಬಂದ ಲಾರಿ ಚಾಲಕ ಎಂದಿನಂತೆ ಬ್ಯಾಡಗಿ ಕಡೆ ಚಾಲನೆ ಶುರು ಮಾಡಿದ್ದಾನೆ. ನಾಗರಾಜನನ್ನು ಕೊಲೆ ಮಾಡಿರುವುದು ಲಾರಿ ಚಾಲಕನಿಗೆ ಗೊತ್ತಾದಂತೆ ನಡೆದುಕೊಂಡಿದ್ದಾಳೆ.

ಲಾರಿ ಮೋಟೆಬೆನ್ನೂರು ಹತ್ತಿರ ಬರುತ್ತಿದ್ದಂತೆ ತಾವು ಇಲ್ಲಿ ಇಳಿಯುವುದಾಗಿ ತಿಳಿಸಿದ ಶೋಭಾ, ನಾಗರಾಜ್ ಶವವನ್ನ ಮೇಲಿನಿಂದ ದೂಡಿದ್ದಾಳೆ. ನಂತರ ತಾನು ಇಳಿದು ಬೇರೆ ಕಡೆ ಪಯಣ ಬೆಳೆಸಿದ್ದಾಳೆ.

ಶೋಭಾ ಲಾರಿ ಚಾಲಕನಿಗೆ ಯಾವುದೇ ಸಂಶಯ ಬರದಂತೆ ಕೊಲೆ ಮತ್ತು ಶವ ಸಾಗಾಟ ಮಾಡಿದ್ದಾಳೆ. ಆಗಸ್ಟ್​ 8ರಂದು ಬ್ಯಾಡಗಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿ ಸಾವನ್ನಪ್ಪಿರುವ ವಿಷಯ ತಿಳಿದು ಬರುತ್ತದೆ. ಪೊಲೀಸರು ಆಗಸ್ಟ್‌ 8ರಂದು ಅಸ್ವಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಾರೆ. ಪ್ರಕರಣ ಜಾಡು ಹಿಡಿದು ವಿಚಾರಿಸಿದಾಗ ಆರೋಪಿ ಶೋಭಾ ಕೊಲೆ ಮಾಡಿರುವ ಅಂಶ ಬೆಳಕಿಗೆ ಬರುತ್ತದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿ ಶೋಭಾಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾಗೆ ಲಾರಿ ಚಾಲಕನನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.

Last Updated : Aug 13, 2021, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.