ETV Bharat / state

ವಾಟ್ಸ್‌ಆ್ಯಪ್​ ವಿಡಿಯೋ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿರುವ ಶಿಕ್ಷಕ - ಶಿಕ್ಷಕ ನಿಂಗಪ್ಪ ಸಾಳುಂಕಿ

ಹಳ್ಳಿಯ ಮಕ್ಕಳಿಗೆ ಆನ್​ಲೈನ್​ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹರಳಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಿಂಗಪ್ಪ ಸಾಳುಂಕಿ ಅವರು, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪಾಠ ಆಲಿಸುವ ವ್ಯವಸ್ಥೆ ಮಾಡಿದ್ದಾರೆ..

A teacher teaching rural students via WhatsApp video ..!
ವಾಟ್ಸಾಪ್​ ವಿಡಿಯೋ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿರುವ ಶಿಕ್ಷಕ..!
author img

By

Published : Jul 26, 2020, 10:16 PM IST

Updated : Jul 26, 2020, 11:20 PM IST

ಹಾನಗಲ್(ಹಾವೇರಿ) : ತಾಲೂಕಿನ ಹರಳಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಶಾಲೆಯಲ್ಲಿ ಮಕ್ಕಳ ಎದುರು ಪಾಠ ಬೋಧನೆ ಮಾಡುವ ಹಾಗೆ ಪಾಠ ಮಾಡಿ, ಅದರ ವಿಡಿಯೋವನ್ನು ಪೋಷಕರ ಮೊಬೈಲ್​ಗೆ ವಾಟ್ಸ್‌ಆ್ಯಪ್​ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ವಾಟ್ಸ್ಆ್ಯಪ್​ ವಿಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿರುವ ಶಿಕ್ಷಕ..

ಕೊರೊನಾ ಬಹುತೇಕ ಎಲ್ಲಾ ವಿಭಾಗದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳ ಶೈಕ್ಷಣಿಕ ಬದುಕು ಕುಂಠಿತವಾಗಬಾರದೆಂಬ ದೃಷ್ಟಿಯಿಂದ ಸರ್ಕಾರ ಆನ್​ಲೈನ್​ ಪಾಠ ಆರಂಭಿಸಿದೆ. ಹಳ್ಳಿಯ ಮಕ್ಕಳಿಗೆ ಆನ್​ಲೈನ್​ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹರಳಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಿಂಗಪ್ಪ ಸಾಳುಂಕಿ ಅವರು, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪಾಠ ಆಲಿಸುವ ವ್ಯವಸ್ಥೆ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಎದುರು ಪಾಠ ಬೋಧನೆ ಮಾಡುವ ಹಾಗೆ ಪಾಠ ಮಾಡಿ, ಅದರ ವಿಡಿಯೋವನ್ನು ಪೋಷಕರ ಮೊಬೈಲ್​ಗೆ ವಾಟ್ಸ್‌ಆ್ಯಪ್​ ಮಾಡುತ್ತಾರೆ.

ಶಿಕ್ಷಕ ನಿಂಗಪ್ಪ ಸಾಳುಂಕಿಯವರು ಈ ರೀತಿ ಪಾಠ ಮಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿರುವುದು ಎಷ್ಟೋ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಹಕಾರಿಯಾಗಿದ್ದು, ಶಿಕ್ಷಕರ ಈ ಹೊಸ ಪ್ರಯತ್ನಕ್ಕೆ ತಾಲೂಕಿನ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Last Updated : Jul 26, 2020, 11:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.