ಹಾವೇರಿ (ರಾಣೆಬೆನ್ನೂರು) : ರೈತನ ಎಸ್ಬಿಐ ಖಾತೆಯಲ್ಲಿದ್ದ ಸುಮಾರು 80 ಸಾವಿರ ರೂಪಾಯಿಯನ್ನು ಖದೀಮರು ಎಗರಿಸಿದ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.
ತಾಲೂಕಿನ ನಂದಿಹಳ್ಳಿ ಗ್ರಾಮದ ಚಂದ್ರಪ್ಪ ದುರಗಪ್ಪ ಅಡ್ಡಿನವರ ಎಂಬ ರೈತನ ಖಾತೆಯಲ್ಲಿದ್ದ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡಲಾಗಿದೆ. ರೈತ ಚಂದ್ರಪ್ಪ ಇತ್ತೀಚೆಗೆ ಮೆಕ್ಕೆಜೋಳ ಮಾರಾಟ ಮಾಡಿ ₹80 ಸಾವಿರವನ್ನು ತನ್ನ ಖಾತೆಯಲ್ಲಿ ಜಮಾ ಮಾಡಿದ್ದರು. ನಂತರ ಫೆ. 29 ರಂದು ರಾಣೆಬೆನ್ನೂರು ನಗರದ ಎಸ್ಬಿಎಂ ಎಟಿಎಂನೊಳಗೆ ₹5000 ಸಾವಿರ ಹಣವನ್ನು ತೆಗೆದುಕೊಂಡಿದ್ದರು.
ಮಾ. 6, 7ರಂದು ರಾಣೆಬೆನ್ನೂರು ನಗರದಲ್ಲಿ ₹40 ಸಾವಿರ, ಮಾ. 8ರಂದು ದಾವಣಗೆರೆಯಲ್ಲಿ 20 ಸಾವಿರ ರೂ. ಮತ್ತು ಮಾ. 9 ರಂದು ತುಮಕೂರಿನ ಹುಳಿಯಾರ ಪಟ್ಟಣದ ಎಟಿಎಂನಲ್ಲಿ ₹20 ಸಾವಿರ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಇದಾದ ನಂತರ ರೈತ ಹಣ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ಬಂದಿದ್ದಾರೆ. ಆಗ ಬ್ಯಾಂಕ್ ಅಧಿಕಾರಿಗಳು ಖಾತೆಯಲ್ಲಿ ಹಣವಿಲ್ಲ ಎಂದಾಗ ರೈತನಿಗೆ ಆತಂಕವಾಗಿದೆ.
ಈ ಕುರಿತು ಹಾವೇರಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.