ಹಾವೇರಿ: ಜಿಲ್ಲಾದ್ಯಂತ 72 ನೇ ಗಣರಾಜ್ಯೋತ್ಸವವನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು.
ಧ್ವಜಾರೋಹಣ ನಂತರ ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಇನ್ನು ಈ ವೇಳೆ ಮಾತನಾಡಿದ ಸಚಿವ, "ಹಾವೇರಿ ಜಿಲ್ಲಾ ಉಸ್ತುವಾರಿ ನೀಡುವಂತೆ ಸಿಎಂ ಬಳಿ ಸಚಿವ ಆರ್ ಶಂಕರ್ ಕೇಳಿದ್ದು ಸತ್ಯ. ಆದರೆ ಯಾರಿಗೆ ಯಾವ ಜಿಲ್ಲೆಗೆ ಉಸ್ತುವಾರಿ ನೀಡಬೇಕು ಎಂಬುದು ಸಿಎಂಗೆ ಬಿಟ್ಟ ವಿಚಾರ. ಈ ಕುರಿತಂತೆ ಸಿಎಂ ಯಾವುದೇ ತೀರ್ಮಾನ ಕೈಗೊಂಡರು ಅದಕ್ಕೆ ನಾವು ಬದ್ಧ" ಎಂದು ತಿಳಿಸಿದರು.
"ಸಚಿವ ಸಂಪುಟ ವಿಸ್ತರಣಿ ಪುನರಚನೆ ಸಿಎಂಗೆ ನೀಡಿದ ಪರಮಾಧಿಕಾರ. ಅವರು ವಿವಿಧ ಸಚಿವರ ಜೊತೆ ಚರ್ಚಿಸಿ ಖಾತೆಗಳ ಹಂಚಿಕೆ ಮಾಡುತ್ತಾರೆ" ಎಂದರು.
ರಾಹುಲ್ ಗಾಂಧಿ ಜಿಡಿಪಿ ಹೆಚ್ಚಳ ಕುರಿತಂತೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ರಾಹುಲ್ ಗಾಂಧಿಗೆ ಬೇಸಿಕ್ ಎಕನಾಮಿಕ್ಸ್ ಗೊತ್ತಿಲ್ಲಾ. ಆರ್ಥಿಕತೆ ಬಗ್ಗೆ ಕಲಿತುಕೊಂಡು ಬಂದು ಆಮೇಲೆ ರಾಹುಲ್ ಮಾತನಾಡಲಿ"
ಎಂದು ತಿಳಿಸಿದರು.
ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ನೀತಿ ವಿರೋಧಿಸಿ ನಗರದ ಮುರುಘಾಮಠದಿಂದ ಟ್ರ್ಯಾಕ್ಟರ್ ಪರೇಡ್ ನಡೆಸಲಾಯಿತು.