ರಾಣೆಬೆನ್ನೂರು: ತಾಲೂಕಿನ ವಿವಿಧ ಅಂಗಡಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 5 ಬಾಲಕರನ್ನು ಕಾರ್ಮಿಕ ಇಲಾಖೆಯ ಜಿಲ್ಲಾಧಿಕಾರಿ ಲಲಿತಾ ಸಾತೇನಹಳ್ಳಿ ರಕ್ಷಣೆ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ.
ಕಿರಾಣಿ ಅಂಗಡಿ, ಟೈಯರ್ ಅಲೈನ್ಮೆಂಟ್ ಮತ್ತು ಪಾದರಕ್ಷೆ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಕಳೆದ ಒಂದು ವಾರದಿಂದ ಬಾಲ ಕಾರ್ಮಿಕರ ಪತ್ತೆಗಾಗಿ ಹತ್ತಾರು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಯಾರೊಬ್ಬರು ಪತ್ತೆಯಾಗಿರಲಿಲ್ಲ. ಇಂದು ರಾಣೆಬೆನ್ನೂರು ನಗರದಲ್ಲಿ ತಹಶೀಲ್ದಾರ್ ಬಸನಗೌಡ ಕೊಟೂರು ಮತ್ತು ಕಾರ್ಮಿಕ ನಿರೀಕ್ಷಕರಾದ ಪಿ.ಜಿ.ಬಾಲಾಜಿ ದಾಳಿ ನಡೆಸಿದಾಗ ಐವರು ವಯಸ್ಸಿಗೆ ಬಾರದ ಮಕ್ಕಳನ್ನು ಅಂಗಡಿ ಮಾಲೀಕರು ದುಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಓದಿ: ಸಚಿವ ಸ್ಥಾನ ಕಳೆದುಕೊಂಡ ನಾಗೇಶ್ಗೆ ಗಿಫ್ಟ್: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ!
ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೆನಹಳ್ಳಿ, ಕಾರ್ಮಿಕ ನಿರೀಕ್ಷಕ ಪಿ.ಜಿ.ಬಾಲಾಜಿ ಹಾಗೂ ರಾಣೆಬೆನ್ನೂರು ತಹಶೀಲ್ದಾರ್ ಬಸನಗೌಡ ಕೊಟೂರು ದಾಳಿಯಲ್ಲಿ ಭಾಗಿಯಾಗಿದ್ದರು.