ಹಾವೇರಿ: ಕುರಿ ಶೆಡ್‌ನಲ್ಲಿದ್ದ ವ್ಯಕ್ತಿಗೆ ಚಾಕು ತೋರಿಸಿ ಆತನನ್ನು ಕಟ್ಟಿಹಾಕಿ ಕುರಿಗಳನ್ನು ದೋಚಿಕೊಂಡು ಹೋದ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಲ್ಲಿ ನಡೆದಿದೆ.
ಕುರಿ ಶೆಡ್‌ನಲ್ಲಿದ್ದ ಬಸನಗೌಡ ಪುರದಕೇರಿಯನ್ನು ಕಟ್ಟಿಹಾಕಿದ ಕಳ್ಳರು 20 ಕುರಿಗಳೊಂದಿಗೆ 20 ಸಾವಿರ ನಗದು ಮತ್ತು ಮೊಬೈಲ್ ಅನ್ನು ದೋಚಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಬಂದಿದ್ದ ನಾಲ್ಕೈದು ಖದೀಮರ ತಂಡ ಈ ದುಷ್ಕೃತ್ಯ ಎಸಗಿದೆ.
![police vehicle overturned](https://etvbharatimages.akamaized.net/etvbharat/prod-images/9519848_havri.jpg)
ಪೊಲೀಸ್ ವಾಹನ ಪಲ್ಟಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸುತ್ತಿದ್ದ ಪೊಲೀಸ್ ವಾಹನ ಪಲ್ಟಿಯಾದ ಘಟನೆ ಸಹ ನಡೆದಿದೆ. ಪೊಲೀಸರ 112 ವಾಹನ ಪಲ್ಟಿಯಾದ ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿದೆ. ಇಬ್ಬರು ಕಾನ್ಸ್ಟೇಬಲ್ಗಳಿಗೆ ಗಾಯಗಳಾಗಿದ್ದು ಅವರನ್ನ ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ವಾಹನ ಚಾಲಕ ಪ್ರವೀಣ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.