ರಾಣೆಬೆನ್ನೂರು: ಸಾಲಬಾಧೆಯಿಂದ ಒಂದೇ ದಿನ ಇಬ್ಬರು ರೈತರು ಸಾವಿನ ಮನೆ ಬಾಗಿಲು ತಟ್ಟಿದ್ದಾರೆ. ನಿಟ್ಟೂರು ಗ್ರಾಮದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಮಂಜಪ್ಪ ಬಸಪ್ಪ ಕರಿಯಪ್ಪನವರ(40) ಮತ್ತು ಮಹೇಶ ಬಸಪ್ಪ ಪರಸಳ್ಳಿ(38) ಆತ್ಮಹತ್ಯೆಗೆ ಶರಣಾದವರು. ರೈತ ಮಂಜಪ್ಪ ಬ್ಯಾಂಕ್ನಲ್ಲಿ 3 ಲಕ್ಷ ರೂ. ಹಾಗೂ ಇತರರೊಂದಿಗೆ 5 ಲಕ್ಷ ರೂ. ಸಾಲ ಪಡೆದಿದ್ದ. ಹಾಗೇ ರೈತ ಮಹೇಶ ಕೂಡ ಬ್ಯಾಂಕ್ನಲ್ಲಿ 2 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗ್ತಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೆಳೆ ನಷ್ಟವಾದ ಕಾರಣ ಸಾಲದ ಒತ್ತಡದಿಂದ ಈ ಇಬ್ಬರು ರೈತರು ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.