ಹಾವೇರಿ: ಜಿಲ್ಲೆಯಲ್ಲಿ ಇಂದು 15 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 400ರ ಗಡಿದಾಟಿ 405ಕ್ಕೆ ಏರಿಕೆಯಾಗಿದೆ.
ಅದರಲ್ಲಿ ಈವರೆಗೆ 288 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು 108 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಇಂದು ಹಾವೇರಿಯ 04, ಸವಣೂರು, ರಾಣೆಬೆನ್ನೂರು, ಹಾನಗಲ್ ತಾಲೂಕುಗಳಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿದ್ದು, ಶಿಗ್ಗಾವಿಯಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ಪೀಡಿತರಲ್ಲಿ ನಾಲ್ಕು ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.