ಹಾವೇರಿ :ಜಿಲ್ಲೆಯಲ್ಲಿ ಇಂದು ಹೊಸದಾಗಿ 46 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕೋವಿಡ್ ತಾಲೂಕುವಾರು ಮಾಹಿತಿ :
ಬ್ಯಾಡಗಿ, ಶಿಗ್ಗಾಂವಿ ತಾಲೂಕುಗಳಲ್ಲಿ ತಲಾ 01, ಹಾನಗಲ್ ತಾಲೂಕಿನಲ್ಲಿ 05, ಹಾವೇರಿ ತಾಲೂಕಿನಲ್ಲಿ 14, ಹಿರೇಕೆರೂರು ತಾಲೂಕಿನಲ್ಲಿ 07, ರಾಣೆಬೆನ್ನೂರು ತಾಲೂಕಿನಲ್ಲಿ 16 ಹಾಗೂ ಸವಣೂರು ತಾಲೂಕಿನಲ್ಲಿ 2 ಜನರಿಗೆ ಕೊರೊನಾ ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,777 ಕ್ಕೇರಿದಂತಾಗಿದೆ.
ಗುಣಮುಖ :
ಜಿಲ್ಲೆಯಲ್ಲಿ ಈ ದಿನ ಕೊರೊನಾ ಸೋಂಕಿನಿಂದ 103 ಜನರು ಗುಣಮುಖರಾಗಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣಗಳಿಷ್ಟು :
ಇನ್ನು ಜಿಲ್ಲೆಯಲ್ಲಿ 644 ಜನ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 192 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.