ETV Bharat / state

ಬಿಜೆಪಿಗೆ ಹೋಗುವಾ ಅಂತಾ ಹೇಳಿದ್ದೇ ಜಮೀರ್: ಸಚಿವ ಗೋಪಾಲಯ್ಯ - ಹಾಸನ ಸುದ್ದಿ

ಜಮೀರ್ ಅಹಮದ್​​​​ ಅವರೇ ನನ್ನನ್ನು ಬಿಜೆಪಿಗೆ ಹೋಗಿ ಅಂತಾ ಹೇಳಿದ್ದು, ಅವರಿಗೆ ಕಾಂಗ್ರೆಸ್ ಸರ್ಕಾರ ಇರೋದು ಇಷ್ಟ ಇರಲಿಲ್ಲ ಎಂದು ಹಾಸನದಲ್ಲಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.

Zameer advised me to join bjp says minister gopalaiah
ಸಚಿವ ಗೋಪಾಲಯ್ಯ ಸುದ್ದಿಗೋಷ್ಟಿ
author img

By

Published : Oct 26, 2021, 8:46 PM IST

ಹಾಸನ:ಜಮೀರ್ ಅಹಮ್ಮದ್​ ಅವರೇ ನನ್ನನ್ನು ಬಿಜೆಪಿಗೆ ಹೋಗಿ ಅಂತಾ ಹೇಳಿದ್ದು, ಅವರಿಗೆ ಕಾಂಗ್ರೆಸ್ ಸರ್ಕಾರ ಇರೋದು ಇಷ್ಟ ಇರಲಿಲ್ಲ ಎಂದು ಸಚಿವ ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆದಾಗುತ್ತೆ. ಹೀಗಾಗಿ ನನ್ನನ್ನ ಬಿಜೆಪಿಗೆ ಹೋಗು ಎಂದು ಜಮೀರ್ ಹೇಳಿದ್ರು ಎಂದ್ರು.

ಸಚಿವ ಗೋಪಾಲಯ್ಯ ಸುದ್ದಿಗೋಷ್ಠಿ

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗೋಪಾಲಯ್ಯ ಅವರನ್ನು ಬಿಜೆಪಿಗೆ ಕಳಿಸಿದ್ದು ನಾನೇ' ಎಂಬ ಜಮೀರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾನು ಅವರು ಹಿಂದೆ ಜೆಡಿಎಸ್‌ನಲ್ಲಿದ್ದಾಗ ಒಳ್ಳೆಯ ಸ್ನೇಹಿತರಿದ್ದೆವು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೋಗಬೇಕು ಎನ್ನೋದು ಅವರ ಭಾವನೆಯಾಗಿತ್ತು. ಈ ರಾಜ್ಯದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂಬುದು ಅವರ ಅಸಮಾಧಾನವಾಗಿತ್ತು. ಬಿಜೆಪಿ ಬಂದರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದು ಎಂಬ ಭಾವನೆ ಅವರದ್ದಾಗಿತ್ತು ಎಂದ್ರು.

ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಒಂದೇ ಜಿಲ್ಲೆಯಲ್ಲಿ ನೆಲೆಸಿರುವ ಬಗ್ಗೆ ಕೆಲವರು ಅಪಸ್ವರ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಈಗಾಗಲೇ ನಡುಕ ಶುರುವಾಗಿದೆ.

ಹಾಗಾಗಿ ಹೀಗೆಲ್ಲಾ ಹೇಳಿಕೆಗಳನ್ನು ಕೊಡ್ತಿದ್ದಾರೆ. ಮುಖ್ಯಮಂತ್ರಿ ಅದೇ ಜಿಲ್ಲೆಯವರು. ಆ ಜಿಲ್ಲೆಯಲ್ಲಿ ಇರಬಾರದು ಎಂದು ಸಂವಿಧಾನದಲ್ಲಿ ಬರೆದಿದ್ದಾರಾ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಕೇವಲ ಚುನಾವಣೆ ಉದ್ದೇಶದಿಂದ ಅಲ್ಲಿ ಇಲ್ಲ. ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದಲೂ ಅವರು ಸಂಚರಿಸುತ್ತಿದ್ದಾರೆ ಎಂದು ಹೇಳಿದ್ರು.

ಬಿಜೆಪಿ ಬಗ್ಗೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಆಡಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪದ ಬಳಕೆ ಮಾಡುವಾಗ ಬೇರೆಯವರಿಗೆ ನೋವಾಗದಂತೆ ಎಚ್ಚರವಹಿಸಬೇಕು. ಬೇರೆಯವರಿಗೆ ನೋವಾಗದಂತೆ ಮಾತಾಡೋದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಎಂದರು.

ಜಮೀರ್​ ಬಿಜೆಪಿಗೆ ಬಂದರೂ ನಾವು ಕರೆದುಕೊಳ್ತೀವಿ. ನಮ್ಮ ಪಕ್ಷದ ತತ್ತ್ವ ಸಿದ್ಧಾಂತ ಒಪ್ಪಿ ಬಂದರೆ ವರಿಷ್ಠರು ತೀರ್ಮಾನ ಮಾಡಿ ಕರೆದುಕೊಳ್ತಾರೆ ಎಂದರು. ಇದೇ ವೇಳೆ ಜಮೀರ್ ಬಿಜೆಪಿಗೆ ಬರ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಅದನ್ನ ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಉತ್ತರಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.