ETV Bharat / state

ಗಂಗೆ ಮೇಲೆ ಆಣೆ ಮಾಡಲು ಹೋಗಿ ನೀರು ಪಾಲಾದ ಯುವಕರು - ಗಂಗೆ ಮೇಲೆ ಪ್ರಮಾಣ

ಇಬ್ಬರು ಯುವಕರು ಪಾಲುದಾರಿಕೆಯಲ್ಲಿ ಬೇಕರಿ ಶುರು ಮಾಡಿದ್ದು, ವ್ಯವಹಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ವ್ಯವಹಾರ ಸರಿಪಡಿಸಿಕೊಳ್ಳಲು ಗಂಗೆ ಮೇಲೆ ಪ್ರಮಾಣ ಮಾಡಲು ತೀರ್ಮಾನಿಸಿದ್ದರು.

Young people drowned in the river Ganges
ಗಂಗೆ ಮೇಲೆ ಆಣೆ ಮಾಡಲು ಹೋಗಿ ನೀರು ಪಾಲಾದ ಯುವಕರು
author img

By

Published : Nov 4, 2022, 2:18 PM IST

ಹಾಸನ: ವ್ಯವಹಾರದ ವಿಚಾರವಾಗಿ ಇಬ್ಬರು ಯುವಕರು ಗಂಗೆ ಮೇಲೆ ಆಣೆ ಪ್ರಮಾಣ ಮಾಡಲು ಹೋಗಿ ನೀರು ಪಾಲಾಗಿರುವ ಘಟನೆ ಹಾಸನ ತಾಲ್ಲೂಕಿನ ಹೊರವಲಯದಲ್ಲಿರುವ ತೇಜೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಂದ್ರು (35) ಆನಂದ್ (30) ಮೃತರು.

ಇಬ್ಬರು ಬೇಕರಿ ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದು, ವ್ಯವಹಾರದ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಹಣ ಪಡೆದು ಕೆಲಸಕ್ಕೆ ಹೋಗದ ಕಾರಣ ಜಗಳವಾಗಿದೆ. ಕೊನೆಗೆ ಗ್ರಾಮದ ಗಂಗೆ ಮೇಲೆ ಪ್ರಮಾಣ ಮಾಡಲು ತೀರ್ಮಾನಿಸಿದ್ದಾರೆ. ಅದರಂತೆ ಇಂದು ಬೆಳಗ್ಗೆ ಇಬ್ಬರು ಪ್ರಮಾಣ ಮಾಡಲು ತೇಜೂರಿನ ಕೆರೆಗೆ ಹೋಗಿ ನೀರಿನಲ್ಲಿ ನಿಂತು ಆಣೆ ಪ್ರಮಾಣ ಮಾಡಲು ಮುಂದಾದಾಗ ಕಾಲು ಜಾರಿ ಇಬ್ಬರು ಬಿದ್ದಿದ್ದಾರೆ.

ಅಗ್ನಿಶಾಮಕದಳ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.