ETV Bharat / state

ಈ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಹಣ ಮೀಸಲಿಟ್ಟರೂ ಸಾಮಾನ್ಯ ಜನರಿಗೆ ನೀರಸ ಬಜೆಟ್

author img

By

Published : Mar 9, 2021, 8:55 AM IST

ಸಿಎಂ ಬಿ.ಎಸ್. ಯಡಿಯೂರಪ್ಪ ಹಾಸನ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 175 ಕೋಟಿ ರೂಪಾಯಿ ನೀಡಿದ್ದಾರೆ. ಆದರೆ, ಪ್ರಸ್ತುತ ಜನಸಾಮಾನ್ಯರಿಗೆ ಬೇಕಾಗುವಂತಹ ಮತ್ತು ಪ್ರಾಣಿ ಸಂಘರ್ಷವನ್ನು ತಡೆಯುವ ಯೋಜನೆಗಳು ಸೇರಿದಂತೆ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡದಿರುವುದು ಜಿಲ್ಲೆಯ ಜನರಿಗೆ ನಿರಾಸೆ ತಂದಿದೆ.

hassan airport
ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ಘೋಷಣೆ

ಹಾಸನ: ಜನರ ಕಸನಾಗಿರೋ ಲೋಹದ ಹಕ್ಕಿ ಹಾರಾಟದ ಕನಸಿಗೆ ಯಡಿಯೂರಪ್ಪ ಬಜೆಟ್​ ಮೂಲಕ ರೆಕ್ಕೆ ಕಟ್ಟಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ವಿಮಾನ ಹಾರಾಟಕ್ಕೆ ಯೋಜನೆಯ ಶೇ.10ರಷ್ಟು ಹಣ ಮೀಸಲಿಟ್ಟಿರೋದು ಆಶಾದಾಯಕ ಭಾವನೆ ಮೂಡಿಸಿದೆ.

ಹಾಸನ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ, ಭತ್ತ, ರಾಗಿ, ಶುಂಠಿ, ಕಾಫಿ, ಏಲಕ್ಕಿ ಮೆಣಸು ಬೆಳೆಯುವಂತಹ ಜಿಲ್ಲೆ. ಪ್ರವಾಸೋದ್ಯಮ ಬೆಳೆಯುತ್ತಿರುವ ಹಿನ್ನೆಲೆ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಅಂದಿನ ಪ್ರಧಾನಿಯಾಗಿದ್ದ ಜಿಲ್ಲೆಯವರೇ ಆದ ಹೆಚ್.ಡಿ.ದೇವೇಗೌಡ್ರು ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುನ್ನುಡಿ ಬರೆದು ಇದಕ್ಕೆ ಬೇಕಾಗುವ ಭೂಮಿಯನ್ನು ಕೂಡಾ ಸ್ವಾಧೀನಪಡಿಸಿಕೊಂಡಿದ್ದು, 25 ವರ್ಷಗಳೇ ಕಳೆದರೂ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ಯಡಿಯೂರಪ್ಪ ಬಜೆಟ್​ನಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಘೋಷಿಸಿದ್ದಾರೆ.

175 ಕೋಟಿ ಕೊಟ್ಟರೂ ಪ್ರಯೋಜನವಿಲ್ಲ : ಈ ಬಾರಿಯ ಬಜೆಟ್​ನಲ್ಲಿ ಯಡಿಯೂರಪ್ಪ ಸುಮಾರು 175 ಕೋಟಿಯನ್ನು ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ನೀಡಿರುವುದು ಆಶಾದಾಯಕ ಬೆಳವಣಿಗೆಯಾದ್ರೂ, ವಿಮಾನ ನಿಲ್ದಾಣಕ್ಕೆ ಸುಮಾರು 2 ರಿಂದ 3 ಸಾವಿರ ಕೋಟಿ ರೂ. ಬೇಕಾಗುತ್ತದೆ. ಹೀಗಿರುವಾಗ ಭೂಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೂ ಪರಿಹಾರ ನೀಡಲು ಸಾಕಾಗುವುದಿಲ್ಲ. ಇನ್ನು ವಿಮಾನ ನಿಲ್ದಾಣವಾಗುವ ಜಾಗದಲ್ಲಿ ಬೃಹತ್ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಸ್ವೀಕರಣಾ ಕೇಂದ್ರಕ್ಕಾಗಿ ಅಳವಡಿಸಿರುವ ಬೃಹತ್ ಕಂಬಗಳನ್ನು ಬದಲಾವಣೆಗಾಗಿಯೇ ಸುಮಾರು 20 ಕೋಟಿ ರೂ. ಬೇಕಾಗಬಹುದು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದು, ಕಾಮಗಾರಿ ಪ್ರಾರಂಭಕ್ಕೆ ಕನಿಷ್ಠ 500-700 ಕೋಟಿ ರೂ. ಅನುದಾನ ಮೀಸಲಿಡಬೇಕಾಗಿತ್ತು ಎನ್ನುವುದು ಜಿಲ್ಲೆಯ ಜನರ ಮಾತು. ಹೀಗಾಗಿ ಬಜೆಟ್ ನಲ್ಲಿ 175 ಕೋಟಿ ನೀಡಿದ್ರು ಪ್ರಯೋಜನಕ್ಕೆ ಬಾರದಂತಾಗಿದೆ.

ಅಂಬೇಡ್ಕರ್ ಸ್ಮಾರಕದ ಜೊತೆಗೆ ಚಾಲನಾ ಪರೀಕ್ಷಾ ಪಥ ಸ್ಥಾಪನೆ: ಶ್ರವಣಬೆಳಗೊಳ ಸೇರಿದಂತೆ ಮತ್ತಿತ್ತರ ಜೈನ ಪುಣ್ಯ ಕ್ಷೇತ್ರಗಳಲ್ಲಿ ವಸತಿ ಗೃಹ, ಪಾದಚಾರಿ ರಸ್ತೆಗಳು ಮತ್ತು ಇತರ ಮೂಲ ಸೌಕರ್ಯಗಳಿಗಾಗಿ 50 ಕೋಟಿ ಮೀಸಲಿಟ್ಟಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ್ದ ಹಾಸನದ ಎ.ಕೆ.ಬೋರ್ಡಿಂಗ್ ಹೋಮ್ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ನೀಡಿರುವುದು ಖುಷಿಯ ವಿಚಾರ. ಇದರ ಜೊತೆಗೆ ಹಾಸನದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಥಾಪನೆ ಮಾಡಲು ನಿರ್ಧಾರಿಸಲಾಗಿದ್ದು, ಜಿಲ್ಲೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಿರುವುದು ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ಇನ್ನು ಜಿಲ್ಲೆಯ ವಿವಿಧ ಜನಾಂಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಕೂಡ ಬಜೆಟ್​ನಲ್ಲಿ ಒತ್ತು ನೀಡಲಾಗಿದ್ದು, ಜಿಲ್ಲೆಯ ಹಿಂದುಳಿದ ತಾಲೂಕಾಗಿರುವ ಆಲೂರು ಕ್ಷೇತ್ರಕ್ಕೆ ವಿಶೇಷ ಅನುದಾನ ಸಿಕ್ಕಿರುವುದು ಖುಷಿಯ ವಿಚಾರ.

ಮಕ್ಕಳ ರಕ್ಷಣಾ ಕೇಂದ್ರ ಸ್ಥಾಪನೆಯ ಜೊತೆಗೆ ಹಿಮ್ಸ್ ಪ್ರವೇಶ ಸಂಖ್ಯೆ ಹೆಚ್ಚಳ:
ಇನ್ನು ಹಾಸನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ರಕ್ಷಣೆಗೆ ಕೇಂದ್ರ ಸ್ಥಾಪನೆಯ ಜೊತೆಗೆ ಎತ್ತಿನಹೊಳೆ ಕಾಮಗಾರಿಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಿ ಸರ್ಕಾರದ ವತಿಯಿಂದ ನೆರವಿನ ಘೋಷಣೆ ಮಾಡಿರುವುದು ಸಮಾಧಾನಕರ ಸಂಗತಿಯಾಗಿದೆ. ಹಿಮ್ಸ್​ ಮೆಡಿಕಲ್ ಕಾಲೇಜಿಗೆ ಹೆಚ್ಚುವರಿಯಾಗಿ 100 ಸೀಟುಗಳನ್ನು ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

ಆನೆ ಹಾವಳಿ ನಿಯಂತ್ರಣ ಬಗ್ಗೆ ನಿರ್ಲಕ್ಷ್ಯ: ಹಾಸನದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಆನೆ ಹಾವಳಿಯ ಉಪಟಳ ಹೆಚ್ಚಾಗುತ್ತಿದೆ. ಮೊನ್ನೆ ನಡೆದ ಸಚಿವರ ಸಭೆಯಲ್ಲಿಯೂ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಜೆಟ್​​ನಲ್ಲಿ ಹೊಸ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ ಸಚಿವರ ಮಾತು ಹುಸಿಯಾಗಿದೆ. ಕಾಡಾನೆ ಸಮಸ್ಯೆ ಬಗೆಹರಿಸಲು ಯಾವುದೇ ಹೊಸ ಯೋಜನೆ ನೀಡದಿರುವುದು ಜಿಲ್ಲೆಯ ಜನರಿಗೆ ಬೇಸರ ಉಂಟು ಮಾಡಿದೆ. ಇನ್ನು ನಾವು ನಮ್ಮ ಇಲಾಖೆಯಿಂದ ಹಾವಳಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರದ ಮೂಲಕವೂ ಸರ್ಕಾರಕ್ಕೆ ಬರೆಯಲಾಗಿತ್ತು. ಬಜೆಟ್​ನಲ್ಲಿ ಇಲಾಖೆಗೆ ನೀಡಿರುವ ಅನುದಾನ ಎಷ್ಟು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದ ಬಳಿಕ ಹೇಳುತ್ತೇನೆ ಎನ್ನುತ್ತಾರೆ ಉಪ ಸಂರಕ್ಷಣಾಧಿಕಾರಿ.

ನೀರಾವರಿ ಯೋಜನೆಯ ಪ್ರಸ್ತಾಪವೂ ಇಲ್ಲ: ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಚನ್ನರಾಯಪಟ್ಟಣ - ಹೊಳೆನರಸೀಪುರಕ್ಕೆ ಒಳಪಡುವ ಕಾಚೇನಹಳ್ಳಿ ಏತ ನೀರಾವರಿ, ಬೇಲೂರಿನ ರಣಘಟ್ಟ ಯೋಜನೆ, ಅರಸೀಕೆರೆಯ 27 ಕೆರೆಗಳಿಗೆ ನೀರುಣಿಸುವ ಯೋಜನೆ, ಸೇರಿದಂತೆ ಅರಕಲಗೂಡು ತಾಲೂಕಿನ ಗಂಗನಾಳು ಏತ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಜಿಲ್ಲೆಯ ಜನರಿಗೆ ನಿರಾಸೆಯನ್ನುಂಟುಮಾಡಿದೆ.

ಕೈಗಾರಿಕೋದ್ಯಮಕ್ಕೂ ನೀಡಲಿಲ್ಲ ಒತ್ತು:

ಜಿಲ್ಲೆಯಲ್ಲಿ ಕೊರೊನಾ ಆವರಿಸಿದ ಬಳಿಕ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗೂ ಅಂಕಿತ ಹಾಡದಿರುವುದು ವಿದ್ಯಾವಂತ ರಿಗೆ ನಿರಾಸೆ ತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.