ETV Bharat / state

ಸರ್ಕಾರವು ಕೊರೊನಾ, ನೆರೆ ಸಮಸ್ಯೆ ಯಶಸ್ವಿಯಾಗಿ ನಿಭಾಯಿಸಿದೆ: ಪ್ರೀತಮ್ ಗೌಡ

author img

By

Published : Aug 9, 2020, 8:09 AM IST

ಸಕಲೇಶಪುರ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಪ್ರೀತಮ್ ಗೌಡ ಭೇಟಿ ನೀಡಿ ಪರಶೀಲನೆ ನಡೆಸಿದರು.

ಶಾಸಕ ಪ್ರೀತಮ್ ಗೌಡ
ಶಾಸಕ ಪ್ರೀತಮ್ ಗೌಡ

ಸಕಲೇಶಪುರ: ವಾಡಿಕೆಗಿಂತ ಹೆಚ್ಚು ಮಳೆ ಅಲ್ಪ ಸಮಯದಲ್ಲಿ ಆಗಿ ಅನೇಕ ಸಮಸ್ಯೆಗಳನ್ನು ಮಲೆನಾಡಿನಲ್ಲಿ ತಂದಿದ್ದು, ಆದರೂ ಸಹ ಕಳೆದ ಬಾರಿಯಂತೆ ಯಡಿಯೂರಪ್ಪನವರು ಯಶಸ್ವಿಯಾಗಿ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದಾರೆ ಎಂದು ಶಾಸಕ ಪ್ರೀತಮ್ ಗೌಡ ಹೇಳಿದರು.

ತಾಲೂಕಿನಲ್ಲಿ ಕಂದಾಯ ಸಚಿವರ ಜೊತೆ ಮಳೆ ಹಾನಿ ಪ್ರದೇಶಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಯಡಿಯೂರಪ್ಪನವರು ಸಿಎಂ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಮಳೆ ಹಾನಿಯುಂಟಾಗಿದ್ದರೂ ಸಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದರು. ಸಿಎಂ ಈ ಬಾರಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ನೆರೆಯಿಂದ ತೊಂದರೆ ಅನುಭವಿಸಿದವರಿಗೆ 10 ಸಾವಿರ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಎಂದರು.

ಜೊತೆಗೆ ಜಿಲ್ಲಾಡಳಿತ ಸಮರೋಪ ಹಾದಿಯಲ್ಲಿ ಮುಂಜಾಗ್ರತೆ ವಹಿಸಿ ತಂಡವಾಗಿ ಕೆಲಸ ಮಾಡಿರುವುದರಿಂದ ಹೆಚ್ಚಿನ ಹಾನಿ ತಪ್ಪಿದೆ. ಮನುಷ್ಯನ ಜೀವದ ಜೊತೆಗೆ ಜೀವನವು ಸಹ ಮುಖ್ಯವಾಗಿದೆ. ಕೊರೊನಾ ವಿಶ್ವವನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದರು ಸಹ ಪ್ರಧಾನಿ ನರೇಂದ್ರ ಮೋದಿರವರು ಬೇರೆಲ್ಲಾ ದೇಶಗಳಿಗಿಂತ ಉತ್ತಮವಾಗಿ ಎದುರಿಸಿದ್ದಾರೆ. ಇದೇ ರೀತಿ ಯಡಿಯೂರಪ್ಪನವರು ಸಹ ಉತ್ತಮವಾಗಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ತಿಳಿಸಿದರು.

ಸುಮಾರು 45ರಿಂದ 50 ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ಯಡಿಯೂರಪ್ಪನವರು ರಾಜ್ಯದ ಆರ್ಥಿಕತೆಯನ್ನು ಮೇಲೆತ್ತುವುದರಲ್ಲಿ ಅನುಮಾನವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯನವರು ಸಕಲೇಶಪುರಕ್ಕೆ ಬಂದಾಗ ಹಾಸನ ತಾಲೂಕಿನಲ್ಲಿ ಬಿದ್ದಿದ್ದ 8 ಮನೆಗಳ ಪರಿಶೀಲನೆಯಲ್ಲಿ ನಿರತನಾಗಿದ್ದೆ. ನಾನು ನನ್ನ ಕ್ಷೇತ್ರ ಬಿಟ್ಟು ಹೊರಗಿನ ಕ್ಷೇತ್ರಗಳ ವಿಷಯಕ್ಕೆ ತಲೆ ಹಾಕುವುದಿಲ್ಲ. ಆದರೆ ಜನರ ಹಾಗೂ ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ಆಗಾಗ ಹೊರ ಹೋಗುವ ಕೆಲಸವನ್ನು ಮಾಡುತ್ತಿದ್ದೇನೆ. ಇದೀಗ ಕಂದಾಯ ಸಚಿವರು , ಜಿಲ್ಲಾ ಉಸ್ತುವಾರಿ ಸಚಿವರು ಸಹ ಆಗಮಿಸಿದ್ದು ಎಲ್ಲಾರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.