ETV Bharat / state

ಸಕಲೇಶಪುರ: ಕಾಡಾನೆ ದಾಳಿಯಿಂದ ಅರ್ಚಕ ಸ್ಥಳದಲ್ಲೇ ಸಾವು - ಅರ್ಚಕ ಸಾವು

ಕಾಡಾನೆ ದಾಳಿಯಿಂದ ಅರ್ಚಕರೊಬ್ಬರು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

worshiper death
ಅಸ್ತಿಕ ಭಟ್
author img

By

Published : Sep 1, 2020, 11:18 AM IST

ಸಕಲೇಶಪುರ: ಕಾಡಾನೆ ದಾಳಿಯಿಂದ ಅರ್ಚಕರೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಮುಂಜಾನೆ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಯಿಂದ ಅರ್ಚಕ ಸ್ಥಳದಲ್ಲೇ ಸಾವು: ಸಾರ್ವಜನಿಕರ ಆಕ್ರೋಶ

ಅಸ್ತಿಕ ಭಟ್ (57) ಮೃತ ದುರ್ದೈವಿ. ಮುಂಜಾನೆ 5:45ರ ವೇಳೆಗೆ ಶೌಚಾಲಯಕ್ಕೆ ಹೋಗಿ ಹಿಂತಿರುಗುವಾಗ ಸುಮಾರು 6 ಕಾಡಾನೆಗಳ ಹಿಂಡೊಂದು ತೀವ್ರ ದಾಳಿ ನಡೆಸಿದ ಪರಿಣಾಮ ಅರ್ಚಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಕೊಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.

ಕಾಡಾನೆ ದಾಳಿಯಿಂದ ತಾಲೂಕಿನಲ್ಲಿ ನಿರಂತರ ಪ್ರಾಣ ಹಾನಿ, ಬೆಳೆ ಹಾನಿಯಾಗುತ್ತಿದ್ದರೂ ಸಹ ಈ ಕುರಿತು ಶಾಶ್ವತ ಪರಿಹಾರ ಹುಡುಕಲು ಸರ್ಕಾರಗಳು ವಿಫಲವಾಗಿವೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕದಿದ್ದಲ್ಲಿ ತಾಲೂಕಿನಲ್ಲಿ ಮತ್ತಷ್ಟು ಸಾವು ನೋವು ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಭೇಟಿ ನೀಡಿ, ಮೃತರ ಅಂತಿಮ ದರ್ಶನ ಪಡೆದು ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.