ETV Bharat / state

ಹಾಸನ ಜಿಲ್ಲೆ; ವಾರದಲ್ಲಿ ನಾಲ್ಕು ದಿನ ಲಾಕ್​ಡೌನ್​​ - ಹಾಸನ ಸುದ್ದಿ

ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಪ್ರತಿನಿತ್ಯ 10 ಗಂಟೆಗೆ ಮಾಡಬೇಕು ಮತ್ತು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಅಂಗಡಿಗಳನ್ನು ತೆರೆಯುವಂತೆ ಸೂಚಿಸಬೇಕು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಹೊಳೆ ನರಸೀಪುರ ಶಾಸಕ ಎಚ್​.ಡಿ. ರೇವಣ್ಣ ಮನವಿ ಮಾಡಿದರು.

weekly four days lockdown in hassan
ಹಾಸನ ಜಿಲ್ಲೆ; ವಾರದಲ್ಲಿ ನಾಲ್ಕು ದಿನ ಲಾಕ್​ಡೌನ್​​
author img

By

Published : May 5, 2021, 6:01 PM IST

Updated : May 5, 2021, 8:59 PM IST

ಹಾಸನ: ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಾದ್ಯಂತ ವಾರದಲ್ಲಿ ನಾಲ್ಕು ದಿನ ಲಾಕ್​ಡೌನ್​ ವಿಧಿಸುವಂತೆ ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಆದೇಶ ನೀಡಿದರು.

ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಹಾಗೂ ಗುರುವಾರಗಳಂದು ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯ ತನಕ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿದ್ದು, ಇನ್ನುಳಿದಂತೆ ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಹಾಸನ ಜಿಲ್ಲೆಯನ್ನು ಸಂಪೂರ್ಣ ಲಾಕ್​ಡೌನ್​ ಮಾಡುವಂತೆ ಸೂಚಿಸಿದರು.

ಹಾಸನ ಜಿಲ್ಲೆ; ವಾರದಲ್ಲಿ ನಾಲ್ಕು ದಿನ ಲಾಕ್​ಡೌನ್​​

ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಪ್ರತಿನಿತ್ಯ 10 ಗಂಟೆಗೆ ಬಂದ್ ಮಾಡಬೇಕು ಮತ್ತು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಅಂಗಡಿಗಳನ್ನು ತೆರೆಯುವಂತೆ ಸೂಚಿಸಬೇಕು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಹೊಳೆ ನರಸೀಪುರ ಶಾಸಕ ಎಚ್​.ಡಿ. ರೇವಣ್ಣ ಮನವಿ ಮಾಡಿದರು. ಇವರಿಬ್ಬರ ಮನವಿಗೆ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಹಾಗೂ ಸಕಲೇಶಪುರ ಶಾಸಕ ಎಚ್.ಡಿ. ಕುಮಾರಸ್ವಾಮಿ ಸಹ ಧ್ವನಿಗೂಡಿಸಿದರು.

ಮೆಡಿಕಲ್ ಎಮರ್ಜೆನ್ಸಿ, ಹಾಲಿನ ವ್ಯಾಪಾರ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಓಡಾಡುವುದನ್ನು ಬಿಟ್ಟರೆ ಇನ್ನುಳಿದಂತೆ ಎಲ್ಲವೂ ಬಂದ್ ಆಗಬೇಕೆಂದು ಪೊಲೀಸ್ ಇಲಾಖೆಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

Last Updated : May 5, 2021, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.