ETV Bharat / state

ಬೆಲೆ ಏರಿಕೆ ಖಂಡಿಸಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ

author img

By

Published : Nov 3, 2021, 10:08 AM IST

Updated : Nov 3, 2021, 12:07 PM IST

ಪಕ್ಷದಲ್ಲಿ ಆಂತರಿಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಲಾರೆ. ಕಾಂಗ್ರೆಸ್​ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರಯತ್ನ ಪಡುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ..

v s ugrappa
ವಿ.ಎಸ್. ಉಗ್ರಪ್ಪ

ಹಾಸನ: ಜನಸಾಮಾನ್ಯರಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದು ಏಕೆ ಎಂದು ನನಗೆ ಇನ್ನು ಅರ್ಥವಾಗುತ್ತಿಲ್ಲ. 2014ರಲ್ಲಿ ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​ಗೆ 120 ಡಾಲರ್​​ ಇತ್ತು. ಅನೇಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಬೆಳವಣಿಗೆ ಹಿನ್ನೆಲೆ, ಕಚ್ಚಾತೈಲದ ಬೆಲೆ 37 ಡಾಲರ್​ಗೆ ಇಳಿದಿದೆ. ಆದ್ರೆ, ಈಗ ಅದು ಏರಿಕೆಯಾಗುತ್ತಿರುವುದು ಏತಕ್ಕಾಗಿ ಎಂದು ಅರ್ಥವಾಗುತ್ತಿಲ್ಲ ಎಂದು ಎಂಎಲ್‌ಸಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ಹಾಸನಾಂಬ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಕದ ರಾಷ್ಟ್ರಗಳಲ್ಲಿ ಬೆಲೆ ಕಡಿಮೆ ಇದೆ. ಆದ್ರೆ, ಭಾರತದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುತ್ತಿರುವುದು ಏಕೆ ಎಂದು ಗೊತ್ತಾಗುತ್ತಿಲ್ಲ. ಇದನ್ನು ರಾಷ್ಟ್ರ ಮತ್ತು ರಾಜ್ಯನಾಯಕರು ಹೇಳಬೇಕಿದೆ ಎಂದರು.

ದೇಶದ ಚುಕ್ಕಾಣಿ ಹಿಡಿದಿರುವ ನಾಯಕರುಗಳಿಗೆ ಹಾಸನಾಂಬೆ ಸದ್ಭುದ್ಧಿ ನೀಡಿ ಬೆಲೆ ಏರಿಕೆ ನಿಯಂತ್ರಣಗೊಳ್ಳಲಿ ಮತ್ತು ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈಶ್ವರಪ್ಪನವರು ಹಿಂದೆ ಉಪ ಮುಖ್ಯಮಂತ್ರಿಗಳಾಗಿದ್ದರು. ಅವರು ಮಾತನಾಡಬೇಕಾದ್ರೆ ಯೋಚಿಸಿ ಮಾತನಾಡಬೇಕು. ಬಿಜೆಪಿಯವರು ಕಾಂಗ್ರೆಸ್​​ ಮುಕ್ತ ರಾಷ್ಟ್ರವನ್ನಾಗಿಸಬೇಕೆಂದು ಮಾತನಾಡಿದ್ರು. ಮಾತನಾಡಬೇಕಾದರೆ ನಾಲ್ಕು ಬಾರಿ ಯೋಚಿಸಬೇಕಿದೆ ಎಂದರು.

ಪಕ್ಷದಲ್ಲಿ ಆಂತರಿಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಲಾರೆ. ಕಾಂಗ್ರೆಸ್​ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರಯತ್ನ ಪಡುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಇದನ್ನೂ ಓದಿ: ಆರ್ಯುವೇದ ವಿವಿಯು DRDO ಕೇಂದ್ರಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕು: ಸಂಸದ ಬಿ.ವೈ.ರಾಘವೇಂದ್ರ

ಉಪಚುನಾವಣೆಯ ತೀರ್ಪು ಹೊರಬಿದ್ದಿದೆ. ಇದು ಮಿಶ್ರ ಫಲಿತಾಂತ. ರಾಷ್ಟ್ರೀಯ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮನ್ನಣೆ ಸಿಕ್ಕಿದೆ. ಇದು ಜನ್ರ ವಿಶ್ವಾಸ ಗಳಿಸಲು ಜನರೇ ಕೊಟ್ಟಿರುವ ಅವಕಾಶ. ಈ ಚುನಾವಣೆಯಲ್ಲಿ ಜಾತ್ಯಾತೀತ ಮತಗಳನ್ನು ಒಡೆಯಲು ಪ್ರಯತ್ನಪಟ್ಟಿದ್ದರು. ಅದು ಸಾಧ್ಯವಾಗಲಿಲ್ಲ. ಮುಂದೆ ಕಾಂಗ್ರೆಸ್​ ಪಕ್ಷಕ್ಕೆ ಎಲ್ಲವೂ ಒಳಿತಾಗುತ್ತದೆ ಎಂದರು.

Last Updated : Nov 3, 2021, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.