ಹಾಸನ: ಚಿಕ್ಕಮಗಳೂರು, ಬೇಲೂರು ಹೋಗುವ ಸವಾರರು ಹಾಸನದೊಳಗೆ ಬಂದು ಹೋಗುವ ಅವಶ್ಯಕತೆ ಇಲ್ಲ, ಈಗ ನೇರವಾಗಿ ಹೊರ ವರ್ತುಲ ರಸ್ತೆಯ ಮೂಲಕ ಈ ಎರಡು ಜಿಲ್ಲೆಗಳಿಗೆ ತಲುಪುವ ಮಾರ್ಗ ಸಿದ್ದವಾಗಿದೆ.
ಹಾಸನದ ಡೈರಿ ಸರ್ಕಲ್ನಿಂದ ಉದ್ದೂರು ರಸ್ತೆ ಮೂಲಕ ರಿಂಗ್ ರಸ್ತೆಯಲ್ಲಿ ಬಂದರೆ 5 ಕಿಲೋ ಮೀಟರ್ ಉಳಿಯುವುದರ ಜೊತೆಗೆ ಟ್ರಾಫಿಕ್ ಕಿರಿ ಕಿರಿ ಇಲ್ಲದೆ ನೆಮ್ಮದಿಯಾಗಿ ಪಯಣಿಸಬಹುದು. ಇನ್ನು ರಿಂಗ್ ರಸ್ತೆಯಲ್ಲಿ ಇರುವ ಅಕ್ಕ ಪಕ್ಕದ ಜಮೀನುಗಳಿಗೆ ಇದೀಗ ಬಾರಿ ಬೇಡಿಕೆ ಬಂದಿದೆ.
ದಶಕಗಳಿಂದ ಹೊರಾಡುತ್ತಿದ್ದ ನಾವುಗಳು ಈಗ ನಿಟ್ಟುಸಿರು ಬಿಟ್ಟಿದ್ದೇವೆ. ಯಾಕಂದರೆ ಈ ರಸ್ತೆ ಗುದ್ದಲಿ ಪೂಜೆ ಮಾಡಿದ ಬಳಿಕ ಮೂರು ಸರ್ಕಾರಗಳು ಚೆಂಜ್ ಆಗಿದ್ದವು. ಅದರೆ ಬಿಜೆಪಿ ಸರ್ಕಾರ ಮತ್ತೆ ಬಂದ ನಂತರ ಉದ್ದೂರು ರಿಂಗ್ ರೋಡ್ ಮೂಲಕ ಬಹಳ ಬೇಗ ಬೆಂಗಳೂರು ಹಾಗೂ ಚಿಕ್ಕಮಗಳೂರು ತಲುಪಬಹುದು ಎಂದು ಇಲ್ಲಿನ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.