ETV Bharat / state

ಮಲಗಿದ್ದಲ್ಲಿಯೇ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರ ಅನುಮಾನಾಸ್ಪದ ಸಾವು! - ಹಾಸನ

ಕೆಲಸ ಅರಸಿಕೊಂಡು ಹಾಸನ ನಗರಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ನಡೆದಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jul 15, 2023, 3:31 PM IST

Updated : Jul 15, 2023, 3:59 PM IST

ಹಾಸನ: ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನದ ಹೊರವಲಯದ ಹನುಮಂತಪುರ ಬಡಾವಣೆಯಲ್ಲಿ ನಡೆದಿದೆ. ಯುಪಿಯ ನಯನ್‌ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು.

ಇವರು ಉತ್ತರ ಪ್ರದೇಶದಿಂದ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಹಾಸನಕ್ಕೆ ಬಂದಿದ್ದರು. ಜಿಲ್ಲೆಯ ಹೊರವಲಯದ ಬಟ್ಟೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ನಿನ್ನೆ(ಶುಕ್ರವಾರ) ಈ ಇಬ್ಬರು ಯುವಕರು ರಾತ್ರಿ ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದ ಹಿಂದೆ ಹಾಸನಕ್ಕೆ ಬಂದಿದ್ದ ರಾಮ್ ಸಂಜೀವನ್ ಹಾಗೂ ನವಾಬ್ ಬಾಡಿಗೆ ರೂಂ ಪಡೆದು ಖಾಸಗಿ ಬಟ್ಟೆ ಕಂಪನಿಯಲ್ಲಿ ಎರಡು ದಿನ ಕೆಲಸ ಮಾಡಿದ್ದರು. ಬಳಿಕ ಇಬ್ಬರಿಗೂ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಜ್ವರ ಬಂದ ಕಾರಣ ಇಬ್ಬರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಔಷಧಿಯನ್ನು ಸೇವಿಸಿ ಮಲಗಿದ್ದರು ಎನ್ನಲಾಗಿದೆ.

ಮುಂಜಾನೆ ಎಂದಿನಂತೆ ಇಬ್ಬರು ಹುಡುಗರು ರೂಮಿನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾಲೀಕರು ಮನೆಯ ಬಾಗಿಲಿನ ಬೀಗ ಒಡೆದು ನೋಡಿದಾಗ ಇಬ್ಬರು ಯುವಕರು ಮಲಗಿದ್ದ ವೇಳೆಗೆ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಮನೆ ಮಾಲೀಕ ಹಾಸನ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಯುವಕರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ರೌಡಿಶೀಟರ್​ ಕೊಲೆ: ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರ ಸಾವು

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಅನುಷಾ (21) ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ. ಕಳೆದ ನಾಲ್ಕು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದ ಕಿರಣ್ ಜೊತೆ ಅನುಷಾ ವಿವಾಹವಾಗಿತ್ತು. ಆದರೆ ಜು.11ರಂದು ಅನುಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಆಕೆಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

'ಹೃದಯಘಾತದಿಂದ ಅನುಷಾ ಮೃತಪಟ್ಟಿರುವ ಬಗ್ಗೆ ಸೋಮವಾರ(ಜು.11) ರಾತ್ರಿ ನಮಗೆ ಮಾಹಿತಿ ಬಂದಿತು. ಗಂಡನ ಮನೆಯವರು ಮಂಗಳವಾರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ, ಅನುಷಾಳ ಮೃತದೇಹ ಕಂಡು ನಮಗೆ ಅನುಮಾನ ಬಂದಿದೆ. ಅವಳ ಸಾವು ಸಹಜ ಸಾವಲ್ಲ, ಇದು ಹೃದಯಘಾತವೂ ಅಲ್ಲ. ಸಾವಿನ ಬಗ್ಗೆ ನಮಗೆ ಅನುಮಾನ ವ್ಯಕ್ತವಾಗುತ್ತಿದೆ'' ಎಂದು ಗಂಡನ ಮನೆಯವರ ವಿರುದ್ಧ, ಮೃತ ವಿವಾಹಿತ ಮಹಿಳೆ ಅನುಷಾ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ: ಗಂಡನ ಮನೆಯವರ ಮೇಲೆ ಸಂಬಂಧಿಕರ ಆರೋಪ

Last Updated : Jul 15, 2023, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.