ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
![Two teenagers drown in lake](https://etvbharatimages.akamaized.net/etvbharat/prod-images/13487610_wfdfdfdfdfdf.jpg)
ಬ್ಯಾಡರಹಳ್ಳಿ ಗ್ರಾಮದ ನಿವಾಸಿ ನಾಗರಾಜು ಎಂಬುವವರ ಮಗ ಪ್ರತಾಪ್ (30)ಹಾಗೂ ಕೃಷ್ಣೇಗೌಡ ಎಂಬುವವರ ಮಗ ಮಂಜುನಾಥ್ (31)ಮೃತಪಟ್ಟ ದುರ್ದೈವಿಗಳು. ಬುಧವಾರ ರಾತ್ರಿ 11 ಗಂಟೆಗೆ ಪ್ರತಾಪ್ ಹಾಗೂ ಮಂಜುನಾಥ್ ಕೆರೆಯಲ್ಲಿ ಮೀನು ಹಿಡಿಯಲು ವಾಹನದ ಟ್ಯೂಬ್ ಬಳಸಿ ಕೆರೆ ಮಧ್ಯ ಭಾಗಕ್ಕೆ ತೆರಳಿ ಬಲೆ ಬಿಡುವಾಗ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿರಿ: 'ಮೋದಿ ಸರ್ನೇಮ್' ಕುರಿತು ಹೇಳಿಕೆಗೆ ಮಾನನಷ್ಟ ಮೊಕದ್ದಮೆ: ಕೋರ್ಟ್ ಮುಂದೆ ರಾಹುಲ್ ಹಾಜರು!?
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಎರಡು ಶವ ಹೊರಕ್ಕೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಗಿದೆ.ಈ ಸಂಬಂಧ ಆಲೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.