ಹಾಸನ: 2019 ರ ಫೆ.14 ರಂದು 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ದಾಳಿ ನಡೆದು ಶುಕ್ರವಾರಕ್ಕೆ ಒಂದು ವರ್ಷವಾಗಿದ್ದು, ದಾಳಿಯಲ್ಲಿ ಮಡಿದವರ ನೆನಪಿಗಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಮತ್ತು ಕರುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗೌರವ ಅರ್ಪಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣರ, ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಹಾಲಿನ ಅಭಿಷೇಕ ಮಾಡಿದರು. ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.