ಹಾಸನ: ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ರಾಜಕೀಯ ಮಾಡೋದು ಬೇಡ. ಸಾರಿಗೆ ನೌಕರರು ಜನರಿಗೆ ತೊಂದರೆ ಕೊಟ್ಟು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ರೇವಣ್ಣ, ಆರನೇ ವೇತನ ಆಯೋಗದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈಗಾಗಲೇ ಒಂದೇ ದಿನಕ್ಕೆ 4000 ಕೋಟಿ ನಷ್ಟ ಆಗಿದೆ ಎಂದು ಗೊತ್ತಾಗಿದೆ. ಸಾರಿಗೆ ನೌಕರರು ತಮ್ಮ ಆಸ್ತಿಯನ್ನು ಹಾಳು ಮಾಡಿಕೊಳ್ಳಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಹಿಡಿತದಲ್ಲಿ ಸಿಲುಕಿದೆ. ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.
ನೌಕರರು ಕೂಡ ಹಠ ಹಿಡಿಯಬಾರದು. ಸಾರ್ವಜನಿಕರ ಹಿತ ಕಾಯಬೇಕು. ಕೂಡಲೇ ಮಾತುಕತೆ ನಡೆಸಿ ಪ್ರತಿಭಟನೆ ಹಿಂಪಡೆಯಬೇಕೆನ್ನುವುದು ನನ್ನ ಭಾವನೆ. ಹಿರಿಯ ಅಧಿಕಾರಿಗಳು ಮತ್ತು ಸಾರಿಗೆ ನೌಕರರ ಮುಖಂಡರು ಕೂತು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು.