ಹಾಸನ: ಮುಷ್ಕರ ನಿರತ ಸಾರಿಗೆ ನೌಕರನನ್ನು ಏಕಾಏಕಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪಾಲಾಕ್ಷ (45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ. ಹಾಸನ ನಗರದ ಒಂದನೇ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಕಳೆದ ಆರು ತಿಂಗಳಿಂದ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ನೊಂದ ಪಾಲಾಕ್ಷ ಇಂದು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ನನ್ನ ಈ ಪರಿಸ್ಥಿತಿಗೆ ಕೆಎಸ್ಆರ್ಟಿಸಿ ರಾಜ್ಯ ಅಧ್ಯಕ್ಷ ಅನಂತಸುಬ್ಬರಾವ್ ಹಾಗೂ ಸ್ಥಳೀಯ ಕೆಎಸ್ಆರ್ಟಿಸಿ ನಾಯಕರುಗಳಾದ ರಂಗೇಗೌಡ, ಶಶಿಧರ್ ಹಾಗೂ ಧರ್ಮ ಅವರೇ ಕಾರಣ ಎಂದು ನೌಕರ ಆರೋಪಿಸಿದ್ದಾನೆ.
ಓದಿ: ಸಾರಿಗೆ ನೌಕರರು ಗೌರಯುತವಾಗಿ ಸೇವೆಗೆ ಹಾಜರಾಗಬೇಕು: ಸಿಎಂ ಬಿಎಸ್ವೈ