ETV Bharat / state

ಕೋಮು ಸೌಹಾರ್ದ ಕದಡುವ ವಿಡಿಯೋ.. ಎಸ್​ಪಿಯಿಂದ ಕಾನೂನು ಕ್ರಮದ ಎಚ್ಚರಿಕೆ - ಹಾಸನದಲ್ಲಿ ಕೊರೊನಾ ಭೀತಿ

ಸಾಮಾಜಿಕ ಗ್ರುಪ್​ಗಳ ಅಡ್ಮಿನ್​ಗಳು ಹಾಗೂ ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅಂತಹ ವಿಡಿಯೋಗಳು ಬಂದಾಗ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಅಂತವರ ವಿರುದ್ಧ ಕೂಲಂಕಷ ತನಿಖೆ ಮಾಡಲಾಗುವುದು ಎಂದರು.

tough-action-against-communal-harm-video-and-photos
ಎಸ್​ಪಿ ಶ್ರೀನಿವಾಸ್ ಗೌಡ
author img

By

Published : Apr 7, 2020, 8:58 PM IST

ಹಾಸನ : ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದ ಕದಡುವ ಅಥವಾ ಧಕ್ಕೆ ತರುವ ವಿಡಿಯೋ,ಫೋಟೋಗಳನ್ನು ಹರಿಬಿಟ್ಟವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ ಎಚ್ಚರಿಕೆ ನೀಡಿದ್ದಾರೆ.

ಎಸ್​ಪಿ ಶ್ರೀನಿವಾಸ್ ಗೌಡ..

ಸಾಮಾಜಿಕ ಗ್ರುಪ್​ಗಳ ಅಡ್ಮಿನ್​ಗಳು ಹಾಗೂ ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅಂತಹ ವಿಡಿಯೋಗಳು ಬಂದಾಗ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಅಂತವರ ವಿರುದ್ಧ ಕೂಲಂಕಷ ತನಿಖೆ ಮಾಡಲಾಗುವುದು ಎಂದರು.

ನಿಯಮ ಉಲ್ಲಂಘಿಸಿದ 656 ಪ್ರಕರಣ ದಾಖಲು : ಲಾಕ್​ಡೌನ್​ ಜಾರಿಯಲ್ಲಿದೆ. ಅನಗತ್ಯವಾಗಿ ರಸ್ತೆಗಿಳಿದ 656 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ತರಕಾರಿ, ಔಷಧಿ ಹಾಗೂ ತುರ್ತು ವಾಹನಗಳನ್ನು ಹೊರತು ಪಡಿಸಿದ್ರೆ, ಉಳಿದವರು ಪಾಸ್​ ತೆಗೆದುಕೊಂಡು ಹೊರಗಡೆ ಬರಬೇಕು ಎಂದು ಹೇಳಿದರು.

ನಾಳೆ(ಏ.8) ಸಂಜೆ 6ರಿಂದ ಖಾಸಗಿ ವಾಹನಗಳು ರಸ್ತೆಗಿಳಿದರೇ ವಶಕ್ಕೆ ಪಡೆಯಲಾಗುವುದು. ತುರ್ತು ಸಂದರ್ಭದಲ್ಲಿ ಹೊರಬರಬೇಕಾದವರು ಜಿಲ್ಲಾ ಪೊಲೀಸ್ ಇಲಾಖೆ ನೇಮಿಸಿರುವ ನೋಡಲ್ ಅಧಿಕಾರಿ ಸಂಖ್ಯೆ 9480804707ಗೆ ಕರೆ ಮಾಡಿ, ಅವರಿಂದ ಪಾಸ್ ಪಡೆದು ಬಳಿಕ ವಾಹನದಲ್ಲಿ ಸಂಚರಿಸಬೇಕು. ಇಲ್ಲವೇ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆರಂಭಿಸಿರುವ ಆನ್‌ಲೈನ್ ಪೇಜ್​ನಲ್ಲಿ ಯಾವ ಕಾರಣಕ್ಕೆ ಹೊರ ಬರಬೇಕು ಎಂಬುದನ್ನು ದಾಖಲಿಸಿದರೆ, ಅದಕ್ಕೆ ತಕ್ಷಣ ಸ್ಪಂದಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಯಾವುದೇ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮೆರವಣೆಗೆ, ಜಾತ್ರೆಯಂತಹ ಸಾಮೂಹಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಎಲ್ಲಾ ಧರ್ಮದ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.