ಸಕಲೇಶಪುರ(ಹಾಸನ): ಖಾಸಗಿ ಗ್ರಾಮೀಣ ಬ್ಯಾಂಕ್ನ ಲಾಕರ್ ಒಡೆದು ಹಣ ದೋಚಿದ್ದ ಮೂರು ಮಂದಿ ಖದೀಮರನ್ನು ಬಂಧನ ಮಾಡುವಲ್ಲಿ ಸಕಲೇಶಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕನ್ನಪುರದ ಪುಟ್ಟರಾಜು ಆಲಿಯಾಸ್ ಗಣಿ (24), ಪುಟ್ಟರಾಜು (22) ಮತ್ತು ಬಣಕಲ್ ಗ್ರಾಮದ ಮಂಜು (23) ಬಂಧಿತ ಆರೋಪಿಗಳು.
ಘಟನೆ ವಿವರ:
ಜನವರಿ 31ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳೆಗದ್ದೆ ಸಮೀಪದ ಹಳ್ಳಿಗಳಿಂದ ಸಾಲ ವಸೂಲಿ ಮಾಡಿದ್ದ 6. 68ಲಕ್ಷ ಹಣವನ್ನ ತಮ್ಮ ಗ್ರಾಮೀಣ ಬ್ಯಾಂಕಿನ ಲಾಕರ್ನಲ್ಲಿಟ್ಟದ್ದರು. ಮರುದಿನ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಬಂದು ನೋಡಿದಾಗ ಬ್ಯಾಂಕಿನ ಬೀಗ ಒಡೆದು ಲಾಕರ್ ನಲ್ಲಿದ್ದ ಹಣವನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ಯಾಂಕ್ ಉದ್ಯೋಗಿಯೇ ಕೃತ್ಯದ ರೂವಾರಿ:
ಬ್ಯಾಂಕ್ನ ಉದ್ಯೋಗಿಯೋರ್ವ ಬ್ಯಾಂಕ್ನಲ್ಲಿ ಇಟ್ಟಿದ್ದ ಹಣದ ಬಗ್ಗೆ ತನ್ನ ಇತರೆ ಇಬ್ಬರು ಸ್ನೇಹಿತರಿಗೆ ತಿಳಿಸಿದ್ದಾನೆ. ಇದಾದ ನಂತರ ಪ್ಲಾನ್ ಮಾಡಿದ ಮೂವರು, ಬ್ಯಾಂಕ್ನ ಲಾಕರ್ ಹೊಡೆದು ಹಣ ದೋಚಿದ್ದಾರೆ. ಎಸ್ಪಿ ಶ್ರೀನಿವಾಸಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಮಾರ್ಗದರ್ಶನದಲ್ಲಿ ರಚನೆಯಾದ ಎರಡು ತಂಡ ಈ ಆರೋಪಿಗಳನ್ನು ಬಂಧಿಸಿದೆ.