ETV Bharat / state

ದುಃಸ್ಥಿತಿಯಲ್ಲಿ ಶಾಲೆ: ಶಾಸಕರು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ - ಶಾಲಾ ಕಾರ್ಯಾಲಯ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮ ಹಲವು ಸಮಸ್ಯೆಗಳ ಆಗರವಾಗಿದೆ. ಈ ಗ್ರಾಮಕ್ಕೆ ಇಬ್ಬರು ಶಾಸಕರಿದ್ರೂ ಇಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಅನ್ನೋ ಆರೋಪಗಳು ಕೇಳಿಬಂದಿವೆ.

ಈ ಶಾಲಾ ಕಟ್ಟಡ ನಿರ್ಮಾಣವಾಗಿ 5 ದಶಕಗಳೇ ಕಳೆದಿವೆ
author img

By

Published : Mar 20, 2019, 10:12 PM IST

ಹಾಸನ: ಸುತ್ತಲೂ ಬಿರುಕು ಬಿಟ್ಟ ಗೋಡೆಗಳು, ಜೀವ ಭಯ ಉಂಟು ಮಾಡುವ ಶಿಥಿಲಗೊಂಡಿರುವ ಛಾವಣಿ, ಕುಸಿದು ಬಿದ್ದ ಕಟ್ಟಡ ಹಾಗೂ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ ಒಂದೆಡೆಯಾದ್ರೆ, ಮತ್ತೊಂದೆಡೆ ಕಟ್ಟಡ ನಿರ್ಮಾಣಕ್ಕೆ ದೇವಾಲಯದ ಆಡಳಿತ ಮಂಡಳಿ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಶಾಲಾ ಕಟ್ಟಡ ನಿರ್ಮಾಣವಾಗಿ 5 ದಶಕಗಳೇ ಕಳೆದಿವೆ


ಇಚ್ಛಾಶಕ್ತಿಯ ಕೊರತೆ:

ಶಿಕ್ಷಣ ಕ್ಷೇತ್ರದಲ್ಲಿ ನಾನಾ ಯೋಜನೆಗಳು ಜಾರಿಗೆ ತರುತ್ತಲೇ ಇರುವ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತವನ್ನ ತಲುಪಿವೆ. ಜೀವ ಭಯದಲ್ಲೇ ಮಕ್ಕಳು ಕಲಿಯುತ್ತಿದ್ದು, ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವುದರ ಮೂಲಕ ಶಾಲಾ ಕಟ್ಟಡವನ್ನ ದುರಸ್ತಿಗೊಳಿಸಿ ಕಾಯಕಲ್ಪ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಆದ್ರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಎಂದು ಜನರು ಆರೋಪಿಸುತ್ತಿದ್ದಾರೆ.

ಹಾಸನ: ಸುತ್ತಲೂ ಬಿರುಕು ಬಿಟ್ಟ ಗೋಡೆಗಳು, ಜೀವ ಭಯ ಉಂಟು ಮಾಡುವ ಶಿಥಿಲಗೊಂಡಿರುವ ಛಾವಣಿ, ಕುಸಿದು ಬಿದ್ದ ಕಟ್ಟಡ ಹಾಗೂ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ ಒಂದೆಡೆಯಾದ್ರೆ, ಮತ್ತೊಂದೆಡೆ ಕಟ್ಟಡ ನಿರ್ಮಾಣಕ್ಕೆ ದೇವಾಲಯದ ಆಡಳಿತ ಮಂಡಳಿ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಶಾಲಾ ಕಟ್ಟಡ ನಿರ್ಮಾಣವಾಗಿ 5 ದಶಕಗಳೇ ಕಳೆದಿವೆ


ಇಚ್ಛಾಶಕ್ತಿಯ ಕೊರತೆ:

ಶಿಕ್ಷಣ ಕ್ಷೇತ್ರದಲ್ಲಿ ನಾನಾ ಯೋಜನೆಗಳು ಜಾರಿಗೆ ತರುತ್ತಲೇ ಇರುವ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತವನ್ನ ತಲುಪಿವೆ. ಜೀವ ಭಯದಲ್ಲೇ ಮಕ್ಕಳು ಕಲಿಯುತ್ತಿದ್ದು, ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವುದರ ಮೂಲಕ ಶಾಲಾ ಕಟ್ಟಡವನ್ನ ದುರಸ್ತಿಗೊಳಿಸಿ ಕಾಯಕಲ್ಪ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಆದ್ರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಎಂದು ಜನರು ಆರೋಪಿಸುತ್ತಿದ್ದಾರೆ.

Intro:ಹಾಸನ: ಸುತ್ತಲೂ ಬಿರುಕು ಬಿಟ್ಟ ಗೋಡೆಗಳು, ಜೀವ ಭಯ ಉಂಟು ಮಾಡುವ ಶಿಥಿಲ ಛಾವಣಿ, ಕುಸಿದು ಬಿದ್ದ ಕಟ್ಟಡ ಹಾಗೂ ಮೇಲ್ಚಾವಣಿವನ್ನ ದುರಸ್ಥಿ ಮಾಡಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ ಒಂದೆಡೆಯಾದ್ರೆ, ಮತ್ತೊಂದೆಡೆ ಕಟ್ಟಡ ನಿರ್ಮಾಣ ಮಾಡಲು ಅಡ್ಡಗಾಲಾಕಿರುವ ದೇವಾಲಯದ ಆಡಳಿತ ಮಂಡಳಿ. ಹಾಗಿದ್ರೆ ಏನಿದು…? ಶಾಲೆಯ ಸಮಸ್ಯೆಯಾದ್ರು ಏನು? ಅಂತೀರಾ…ಈ ಸ್ಟೋರಿ ನೋಡಿ….
 
ಹೌದು ಮುರಿದು ಬಿದ್ದ ಶಾಲಾ ಮುಖ್ಯ ಶಿಕ್ಷಕರ ಕೊಠಡಿ. ಮಳೆ ಬಂದ್ರೆ ಸಾಕು ಮಕ್ಕಳು ಕೂರಲು ಸಾಧ್ಯವಾಗದ ಪರಿಸ್ಥಿತಿ, ಯಾವಾಗ ಬಿದ್ದು ಬೀಳುವುದೋ ಎಂಬ ಭಯದಲ್ಲಿಯೇ ಪಾಠ ಕೇಳುವ ವಿದ್ಯಾರ್ಥಿಗಳು ಮತ್ತು ಪಾಠ ಮಾಡುವ ಶಿಕ್ಷಕರುಗಳು. ಹಾಳಾಗಿರುವ ಕುಡಿಯುವ ನೀರಿನ ಪೈಪ್ ಮತ್ತು ಟ್ಯಾಂಕ್, ಗಬ್ಬು ನಾರುತ್ತಿರುವ ಶೌಚಾಲಯ, ಹೀಗೆ ಹೇಳುತ್ತಾ ಹೋದ್ರೆ ಸಾಕಷ್ಟು ಸಮಸ್ಯೆಗಳ ಆಗರವೇ ಇದೆ. ಆದ್ರೆ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಇಚ್ಚಾಶಕ್ತಿ ಯಾವೊಬ್ಬ ಜನಪ್ರತಿನಿಧಿಗಿಲ್ಲದೇ ಕಷ್ಟವನ್ನ ಹೇಳಿಕೊಳ್ಳಲು ಸಾಧ್ಯವಾಗದೇ ಮಕ್ಕಳ ಸ್ಥಿತಿ ಡೋಲಾಯಮಾನವಾಗಿದೆ.
 
ಮುರಿದು ಬಿದ್ದ ಶಾಲಾ ಕಾರ್ಯಾಲಯ   
ನಾವು ಹೇಳುತ್ತಿರುವ ಶಾಲೆ ಎಲ್ಲೋ ದೂರದ ಮಲೆನಾಡಪ್ರದೇಶದಲ್ಲೋ, ಅಥವಾ ಕಾಡಂಚಿನ ಪ್ರದೇಶದಲ್ಲೊ ಇಲ್ಲ. ಇಂತಹದೊಂದು ಶಾಲೆ ಇರೋದು ಮಾಜಿ ಪ್ರಧಾನಿ ದೇವೇಗೌಡ್ರು ಪ್ರತಿನಿಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ, ಕಡೂರು ಮತ್ತು ಹಾಸನ ಜಿಲ್ಲೆಗೆ ಸಮೀಪವಿರೋ ಅರಸೀಕೆರೆ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ. ಈ ಶಾಲಾ ಕಟ್ಟಡ ನಿರ್ಮಾಣವಾಗಿ 5 ದಶಕಗಳೇ ಕಳೆದಿವೆ. ಸದ್ಯ ಮೊನ್ನೆ ಮೊನ್ನೆ ತಾನೆ ಶಾಲಾ ಕಾರ್ಯಾಲಯದ ಮೇಲ್ಚಾವಣಿ ಸಂಪೂರ್ಣ ಕುಸಿದಿದೆ. ಹೀಗಾಗಿ ಪಕ್ಕದ ಶಾಲೆಯ ಮೇಲ್ಚಾವಣಿ ಕುಸಿಯಬಹುದೆಂಬ ಆತಂಕ ಮನೆ ಮಾಡಿದ್ರು. ವಿಧಿಯಿಲ್ಲದೇ ಇಲ್ಲಿನ ಶಿಕ್ಷಕರು ಮಕ್ಕಳಿಗೆ ಪಾಠ ಮಾಡ್ತಿದ್ದಾರೆ.
 
120ಕ್ಕೂ ಹೆಚ್ಚು ಮಕ್ಕಳಿರುವ ಶಾಲೆ:
ಅರಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕಟ್ಟಡದ ದುರಸ್ಥಿಗಾಗಿ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ರು ಕೂಡಾ ರಿಪೇರಿ ಮಾಡುವ ಕೆಲಸಕ್ಕೆ ಶಿಕ್ಷಣ ಇಲಾಖೆಯಲಾಗಲೀ, ಜನಪ್ರತಿನಿಧಿಗಳಾಗಲೀ, ಇಚ್ಚಾಶಕ್ತಿಯನ್ನ ತೊರದಿರುವುದು ವಿಪರ್ಯಾಸ. ಸದ್ಯ ಈ ಶಾಲೆಯಲ್ಲಿ 120ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡ್ತಿದ್ದಾರೆ. ಆದ್ರೆ ಮಕ್ಕಳಿಗೆ ಮಾತ್ರ ಸೂಕ್ತ ಮೂಲಸೌಕರ್ಯವನ್ನ ಒದಗಿಸಿಲ್ಲ. ಹೀಗಾಗಿ ಸರ್ಕಾರಿ ಶಾಲೆಯಿಂದ್ರೆ ಮೂಗು ಮುರಿಯುವವರೇ ಇರುವ ಸಂದರ್ಭದಲ್ಲಿ ಈ ಶಾಲೆಯಲ್ಲಿ 120ಕ್ಕೂ ಅಧಿಕ ಮಕ್ಕಳಿದ್ದಾರೆಂದ್ರೆ ನಿಜಕ್ಕೂ ಆಶ್ಚರ್ಯವೇ ಸರಿ.
 
120 ಮಕ್ಕಳು ಕಲಿಯುತ್ತಿರುವ ಶಾಲೆಯಲ್ಲಿ 5 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಈ ಶಾಲಾ ಕಟ್ಟಡದ ಅಕ್ಷರದಾಸೋಹದ ಅಡುಗೆಕೋಣೆ ಸೇರಿದಂತೆ ಶಾಲೆ ಸುತ್ತಲೂ ಗೋಡೆಗಳು ಬಿರುಕುಗೊಂಡಿವೆ. ಛಾವಣಿಯ ಸಿಮೆಂಟ್‌ಮೇಲಿಂದ ಮೇಲೆ ಉದುರುತ್ತಿದ್ದು ಕಬ್ಬಿಣದ ಸರಳುಗಳು ಕಾಣಿಸಿಕೊಂಡು ಭಯ ಉಂಟು ಮಾಡಿದೆ.
 
ಭಯ ಹುಟ್ಟಿಸಿದ ಛಾವಣಿಗಳು:
ಶಾಲೆಯ ಎಲ್ಲ ಕೊಠಡಿಗಳ ಛಾವಣಿಯ ಹೆಂಚುಗಳು ಉದುರಿದ ಪರಿಣಾಮ ಮರದ ತೊಲೆಗಳು ಕಾಣಿಸಿಕೊಂಡಿದ್ದು, ಮಕ್ಕಳು ಜೀವ ಕೈಯಲ್ಲಿ ಹಿಡಿದೇ ಕಲಿಯಬೇಕಿದೆ. ಮಳೆಗಾಲದಲ್ಲೂ ಸಹ ಸೋರುತ್ತದಂತೆ. ಅಲ್ಲದೇ . ಪಾಠ ಮಾಡುವ ಸಮಯದಲ್ಲಿ ಶಿಕ್ಷಕರು ಮೈಯಲ್ಲ ಕಣ್ಣಾಗಿಸಿಕೊಂಡೇ ಕರ್ತವ್ಯ ನಿರ್ವಹಿಸಬೇಕಿದೆ.
 
ಹದಗೆಟ್ಟ ಶೌಚಾಲಯಗಳು:
ಮಕ್ಕಳ ಹಿತದೃಷ್ಟಿಯಿಂದ ಶಾಲಾ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಶೌಚಾಲಯಗಳು ಗಬ್ಬು ನಾರುತ್ತಿವೆ. ಅಲ್ಲದೇ ಅಂಗನವಾಡಿ ಕೊಠಡಿಯ ಹಿಂಭಾಗದಲ್ಲಿಯೇ ಗ್ರಾಮಸ್ಥರುಗಳು ಬಯಲು ಶೌಚವನ್ನಾಗಿಸಿಕೊಂಡಿರುವುದರಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ಮಕ್ಕಳಿಗೆ ಶೌಚಾಲಯ ಸೌಲಭ್ಯವಿಲ್ಲದ ಪರಿಣಾಮ ಬಯಲನ್ನೇ ಅವಲಂಬಿಸಿದ್ದಾರೆ.
 
ಸೂರ್ಯನಾರಾಯಣ ದೇವಾಲಯದಿಂದ ಕಾಮಗಾರಿಗೆ ಅಡ್ಡಿ:
ಅರಕೆರೆ ಗ್ರಾಮಕ್ಕಿಗ ಸದ್ಯ ಇರುವ ಶಿಥಿಲಗೊಂಡ ಶಾಲೆಯನ್ನು ತೆರುವುಗೊಳಿಸಿ ನೂತನ ಕೊಠಡಿಗಳನ್ನು ನಿರ್ಮಿಸೋಕೆ ಮುಂದಾದ ಶಿಕ್ಷಣ ಇಲಾಖೆಗೆ ಶಾಕ್ ಕೊಟ್ಟಿದ್ದು, ಪ್ರಾಶ್ಚ್ಯವಸ್ತು ಇಲಾಖೆಯ ಅದಿಕಾರಿಗಳು. ಕಾರಣ ದೇವಾಲಯದ ಸಮೀಪವೇ ಪುರಾತನ ಸೂರ್ಯನಾರಾಯಣ ದೇವಾಲಯವಿರುವುದರಿಂದ ದೇವಾಲಯಕ್ಕೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ಶಾಲೆಯನ್ನ ನಿರ್ಮಾಣ ಮಾಡದಂತೆ ನೋಡಿಸ್ ನೀಡಿದ್ದಾರಂತೆ. ಹಾಗಾಗಿ ಶಾಲೆಯನ್ನ ಕಟ್ಟಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಜೀವ ಭಯದಲ್ಲಿಯೇ ಮಕ್ಕಳು ಶಾಲೆಗೆ ಬಂದು ಹೋಕ್ತಾರೆ.
 
ಕಲ್ಲುಗಣಿಗಾರಿಕೆಗೆ ಅಡ್ಡಿಪಡಿಸದ ಕೇಂದ್ರ ಪುರಾತತ್ವ ಇಲಾಖೆ:
ಗ್ರಾಮದಲ್ಲಿರುವ ಪುರಾತನ ದೇವಾಲಯದಲ್ಲಿ ಒಂದಾಗಿದೆ ಸೂರ್ಯನಾರಾಯಣ ದೇವಾಲಯ. ಕಳೆದ 2 ವರ್ಷಗಳ ಹಿಂದಷ್ಟೆ ಇದನ್ನ ಕೇಂದ್ರ ಪುರಾತತ್ವ ಇಲಾಖೆ ವಶಪಡಿಸಿಕೊಂಡಿದೆ. ಹೀಗಾಗಿ ದೇವಾಲಯದ 300 ಮೀಟರ್ ವೃತ್ತಾಕಾರದಲ್ಲಿ ಯಾವುದೇ ಕಟ್ಟಡವಾಗಲೀ, ಮನೆಯನ್ನಾಗಲೀ, ಶಾಲೆಯನ್ನಾಗಲೀ ನಿರ್ಮಿಸದಂತೆ ಪುರತತ್ವ ಇಲಾಖೆ ಆದೇಶವನ್ನ ಹೊರಡಿಸಿರೋದ್ರಿಂದ ಕುಸಿದು ಬಿದ್ದ ಕಟ್ಟಡವನ್ನ ಕೂಡಾ ದುರಸ್ಥಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ರೆ ಅಣತಿ ದೂರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ಕೂಡಾ ಪುರತತ್ವ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಗ್ರಾಮಸ್ಥರುಗಳ ಆರೋಪ.

ಇಚ್ಚಾಶಕ್ತಿಯ ಕೊರತೆ:  
ಶಿಕ್ಷಣ ಕ್ಷೇತ್ರದಲ್ಲಿ ನಾನಾ ಯೋಜನೆಗಳು ಜಾರಿಗೆ ತರುತ್ತಲೇ ಇರುವ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತವನ್ನ ತಲುಪಿದೆ. ಜೀವ ಭಯದಲ್ಲೇ ಮಕ್ಕಳು ಕಲಿಯುತ್ತಿದ್ದು ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವುದರ ಮೂಲಕ ಶಾಲಾ ಕಟ್ಟಡವನ್ನ ದುರಸ್ಥಿಗೊಳಿಸುವ ಕಾಯಕಲ್ಪ ಕಲ್ಪಿಸಲು ಸರಕಾರ ಮುಂದಾಗಬೇಕು. ಆದ್ರೆ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಕೊರತೆಯಿದೆ.
 
ರಸ್ತೆ ಬಂದ್ ಮಾಡಿ ಪ್ರತಿಭಟನೆ:
ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದಲ್ಲದೇ ದುರಸ್ಥಿ ಕಾರ್ಯವನ್ನ ಮಾಡಲು ಅಡ್ಡಿಪಡಿಸುತ್ತಿರುವ ಪುರತತ್ವ ಇಲಾಖೆ, ಹಾಗೂ ಶಿಕ್ಷಣ ಇಲಾಖೆಯ ವಿರುದ್ದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಶಾಲೆಯನ್ನ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಸಿದ್ದಾರೆ. ಅಲ್ಲದೇ ಕೂಡಲೇ ಸಂಬಂಧಪಟ್ಟ ಇಲಾಖೆಯವರು ದುರಸ್ಥಿ ಕಾರ್ಯವನ್ನ ಮಾಡದೇ ಇದ್ದರೇ, ಬೇಲೂರು-ವೆಲ್ಲುಪುರ ರಾಜ್ಯ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ಮಾಡುವುದರಾಗಿ ಎಚ್ಚರಿಕೆ ನೀಡಿದ್ದಾರೆ.
 
ಇಬ್ಬರು ಶಾಸಕರುಗಳನ್ನ ಹೊಂದಿರೋ ಗ್ರಾಮ:
ಅರಸೀಕೆರೆ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಇಷ್ಟೊಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಮತ್ತೊಂದು ಕಾರಣವಿದೆ. ಅದೇನಪ್ಪಾ ಅಂದ್ರೆ ಈ ಗ್ರಾಮ ಇಬ್ಬರು ಶಾಸಕರನ್ನ ಹೊಂದಿದೆ. ಕಂದಾಯದ ವಿಚಾರಕ್ಕೆ ಅರಸೀಕೆರೆ ತಾಲ್ಲೂಕಿಗೆ ಹೋಗುವ ಗ್ರಾಮದ ಜನ ಚುನಾವಣೆ ಬಂದ್ರೆ ಮಾತ್ರ ಬೇಲೂರು ಕ್ಷೇತ್ರದ ಅಭ್ಯರ್ಥಿಗೆ ಮತದಾನ ಮಾಡ್ತಾರೆ. ಹೀಗಾಗಿ ಶಾಸಕರುಗಳು ಒಬ್ಬರ ಮೇಲೊಬ್ಬರು ಮಾತಿನ ಕೆಸರೆರಚಾರವನ್ನ ಮಾಡುತ್ತಾ ಕಾಲಕಳೆಯುತ್ತಿದ್ದಾರೆಯೇ ಹೊತರು, ಆ ಶಾಲೆಯನ್ನ ದುರಸ್ಥಿ  ಮಾಡುವ ಗೊಜೀಗೆ ಹೋಗದಿರುವುದು ನಿಜಕ್ಕೂ ವಿಪರ್ಸಸವೇ ಸರಿ.
 
·         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
 



Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.