ETV Bharat / state

ಹಿಂದಿನದ್ದೆಲ್ಲ ಪೋಸ್ಟ್ ಮಾರ್ಟಂ ಮಾಡೋಕೆ ಹೋಗಲ್ಲ: ಪ್ರೀತಂಗೌಡ - ಬಿಜೆಪಿ ಶಾಸಕ ಪ್ರೀತಂ ಗೌಡ

ಶತಾಯ ಗತಾಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಆಡಳಿತ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಪ್ರೀತಂ ಗೌಡ ತಮ್ಮ ಅಸಲೀ ಆಟ ಶುರುಮಾಡಿದ್ದು, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.

ಶಾಸಕ ಪ್ರೀತಂ ಗೌಡ ಮತ್ತು ಹೆಚ್.ಡಿ.ರೇವಣ್ಣ
author img

By

Published : Sep 26, 2019, 8:14 PM IST

ಹಾಸನ: ಶತಾಯ- ಗತಾಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಆಡಳಿತ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಪ್ರೀತಂ ಗೌಡ ತಮ್ಮ ಅಸಲೀ ಆಟ ಶುರುಮಾಡಿದ್ದು, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.

ಹೌದು, ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿ ಜಿಲ್ಲೆಯಲ್ಲಿ ಕಮಲವನ್ನರಳಿಸುವಲ್ಲಿ ಯಶಸ್ವಿಯಾಗಿರೋ ಬಿಜೆಪಿ ಶಾಸಕ ಪ್ರೀತಂಗೌಡ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರಾ..? ಎಂಬ ಪ್ರಶ್ನೆ ಉದ್ಭವವಾಗಿದೆ. ಜೆಡಿಎಸ್ ಪಾಳಯದಲ್ಲಿ ಕೇಸರಿ ಕಹಳೆಯೂದಿರೋ ಪ್ರೀತಂ ಗೌಡ ರೇವಣ್ಣ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಕಳೆದ 14 ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಹೆಸರಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಹೊಳೆನರಸೀಪುರದ ಶಾಸಕ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಸಾವಿರಾರು ಕೋಟಿ ಅನುದಾನ ಹೊತ್ತು ತಂದಿದ್ದರು.

ಬಿಜೆಪಿ ಶಾಸಕ ಪ್ರೀತಂ ಗೌಡ

ಇನ್ನು ಮೈತ್ರಿ ಸರ್ಕಾರ ಪತನವಾಗಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರೇವಣ್ಣ ಅನುಮೋದನೆಗೊಳಿಸಿದ್ದ ಅನುದಾನಗಳಿಗೆ ತಡೆ ಹಿಡಿಸುವಲ್ಲಿ ಪ್ರೀತಂ ಗೌಡ ಯಶಸ್ವಿಯಾಗಿದ್ದಾರೆ, ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾಗುವ ಮೂಲಕ ರೇವಣ್ಣ ಅವರ ವಿರುದ್ಧ ಸಮರ ಸಾರಿದ್ದು, ಜಿಲ್ಲೆಗೆ ರೇವಣ್ಣ ಅವರು ತಂದಿರೋ ಅನುದಾನಗಳನ್ನು ಬೇರೆಡೆ ವಿನಿಯೋಗಿಸೋ ಮೂಲಕ ಪ್ರಚಾರ ಪಡೆಯೋ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ.

ರೇವಣ್ಣ ಅವರಿಗೆ ಎಲ್ಲಿ ಹೆಸರು ಬಂದು ಬಿಡುತೋ ಎಂಬ ಏಕೈಕ ಕಾರಣಕ್ಕೆ ನಗರದ ಅಂದವನ್ನು ಹೆಚ್ಚಿಸಬಹುದಾದ ಒಂದು ಉತ್ತಮ ಯೋಜನೆಗೆ ಬ್ರೇಕ್ ಹಾಕಲು ಮುಂದಾಗಿರೋದು ಮಾತ್ರ ವಿಪರ್ಯಾಸವೇ ಸರಿ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಅವರು ಈ ಹಿಂದೆ ನಡೆದ ಕಾಮಗಾರಿಗಳಿಗೆಲ್ಲ ನಾನು ಪೋಸ್ಟ್ ಮಾರ್ಟಂ ಮಾಡಲು ಹೋಗಲ್ಲ ಎನ್ನುವ ಮೂಲಕ ಹಿಂದಿನ ಮೈತ್ರಿ ಸರ್ಕಾರದ ಕಾಮಗಾರಿಗಳನ್ನು ನಡೆಯಲು ಬಿಡಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

Intro:ಹಾಸನ: ಶತಯಾ ಗತಾಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಆಡಳಿತ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಪ್ರೀತಂ ಗೌಡ ತಮ್ಮ ಅಸಲೀ ಆಟವನ್ನು ಶುರುಮಾಡಿದ್ದು, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.
ಹೌದು, ಜೆಡಿಎಸ್ ಭದ್ರಕೋಟೆಯನ್ನ ಭೇದಿಸಿ ಹಾಸನದಲ್ಲಿ ಕಮಲವನ್ನರಳಿಸುವಲ್ಲಿ ಯಶಸ್ವಿಯಾಗಿರೋ ಬಿಜೆಪಿ ಶಾಸಕ ಪ್ರೀತಂ ಗೌಡ ಸೇಡಿನ ರಾಜಕೀಯ್ಕೆ ಮುಂದಾಗಿದ್ದಾರಾ..? ಎಂಬ ಪ್ರಶ್ನೆ ಉದ್ಭವವಾಗಿದೆ. ಜೆಡಿಎಸ್ ಪಾಳೆಯದಲ್ಲಿ ಕೇಸರಿ ಕಹಳೆಯೂದಿರೋ ಪ್ರೀತಮ್ ಗೌಡ ರೇವಣ್ಣ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಕಳೆದ ೧೪ ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಹೆಸರಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಹೊಳೆನರಸೀಪುರದ ಶಾಸಕ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಸಾವಿರಾರು ಕೋಟಿ ಅನುಧಾನವನ್ನು ಹೊತ್ತು ತಂದಿದ್ರು, ಅದರಲ್ಲಿ ಅದೆಷ್ಟೇ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದರೆ, ಮಂಜೂರಾಗಿರೋ ಕಾಮಗಾರಿಗಳು ಅದೇಷ್ಟೋ ಇವೆ, ಆದ್ರೆ ಮೈತ್ರಿ ಸರ್ಕಾರ ಫಥನವಾಗಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲೆ ರೇವಣ್ಣ ಅವರು ಅನುಮೋಧನೆ ಗೊಳಿಸಿದ್ದ ಅನುಧಾನಗಳಿಗೆ ತಡೆ ಹಿಡಿಸುವಲ್ಲಿ ಯಶಸ್ವಿಯಾಗಿರೋ ಪ್ರೀತಂ ಗೌಡ, ಮೈತ್ರಿ ಸರ್ಕಾರದ ಮಹತ್ವಾಕಾಂಶೆಯ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾಗುವ ಮೂಲಕ ರೇವಣ್ಣ ಅವರ ವಿರುದ್ಧ ಸಮರ ಸಾರಿದ್ದು, ಜಿಲ್ಲೆಗೆ ರೇವಣ್ಣ ಅವರು ಅವರು ತಂದಿರೋ ಅನುಧಾನಗಳನ್ನ ಬೇರೆಡೆ ವಿನಿಯೋಗಿಸೋ ಮೂಲಕ ಪ್ರಚಾರ ಪಡೆಯೋ ಮಾಸ್ಟರ್ ಪ್ಲಾನ್ ಮಾಡಿದ್ದು, ಈ ಹಿಂದೆ ತಮ್ಮನ್ನು ಆಕಸ್ಮಿಕ ಶಾಸಕ ಎನ್ನುತ್ತಿದ್ದ ರೇವಣ್ಣ ಅವರು ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಹಕ್ಕುಚ್ಯತಿಗೆ ಮುಂದಾಗಿದ್ರು, ಆದರೀಗಾ ತಮ್ಮದೆ ಸರ್ಕಾರ ಅಸ್ಥಿತ್ವದಲ್ಲಿರುವುದರಿಂದ ಜಿಲ್ಲೆಯ ಏಕೈಕ ಶಾಸಕರಾಗಿದ್ರೂ ಸಚಿವ ಸ್ಥನ ಪಡೆಯುವುದರಲ್ಲಿ ವಿಫಲಾರಿಗಿದ್ರು ತಮ್ಮಹಾವು ಏಣಿ ಆಟವನ್ನು ಮುಂದುವರಿಸಿದ್ದು, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿರುವಂತೆ ಮೇಲ್ನೋಟಕ್ಕ ಭಾಸವಾಗುತ್ತಿದೆ.
ಇದಕ್ಕೆ ತಾಜ ಉದಾಹರಣೆ ಎಂಬಂತೆ, ಹಿಂದಿನ ಸರ್ಕಾರದ ಯಾವುದೇ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಅಂತಾ ಹೇಳ್ತ ಹೇಳ್ತಾನೆ ಈಗಾಗಲೇ ರೇವಣ್ಣ ಅವರು ತಂದಿದ್ದ ನೂರಾರು ಕೋಟಿ ಅನುಧಾನಕ್ಕೆ ಕೊಕ್ಕೆ ಹಾಕಿದ್ದಾರಲ್ಲದೇ, ಪ್ರವಾಸೋಧ್ಯಮ ದೃಷ್ಠಿಯಿಂದ ನಗರದ ಆಕರ್ಷಣೆಯನ್ನ ಹೆಚ್ಚಿಸಬಹುದಾಗಿದ್ದ ರೇವಣ್ಣ ಅವರ ಯೋಜನೆಗಳಲ್ಲೊಂದಾದ ಹಾಸನದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಲಾಗಿರೋ ಪಂಚತಾರ ಹೋಟೆಲ್ ಸುತ್ತ ಬೋಟಿಂಗ್, ಮಕ್ಕಳ ಆಟಿಕೆ ಟ್ರೈನ್ ಹೀಗೆ ಜನಕಾರ್ಷಣೆಗೊಳ್ಳಬಲ್ಲ ಉತ್ತಮವಾದ ಕಾರ್ಯಕ್ಕೆ ಕೊಕ್ಕೆ ಹಾಕಿರೋ ಹಾಸನದ ಶಾಸಕ ಪ್ರೀತಂ ಗೌಡ, ಮೈತ್ರಿ ಸರ್ಕಾರ ಅವಧಿಯಲ್ಲಿ ಈ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿಟ್ಟಿದ ೧೪೪ಕೋಟಿ ಹಣವನ್ನು ತಡೆಹಿಡಿದು ಆ ಅನುಧಾನವನ್ನು ಬೇರೆಡೆಗೆ ವಿನೋಯೋಗಿಸುವುದಾಗಿ ಹೇಳಿಕೆ ನೀಡಿದ್ದು, ರೇವಣ್ಣ ಅವರಿಗೆ ಎಲ್ಲಿ ಹೆಸರು ಬಂದು ಬಿಡುತೋ ಎಂಬ ಏಕೈಕ ಕಾರಣಕ್ಕೆ ನಗರದ ಅಂದವನ್ನು ಹೆಚ್ಚಿಸಬಹುದಾದ ಒಂದು ಉತ್ತಮ ಯೋಜನೆಗೆ ಬ್ರೇಕ್ ಹಾಕಲು ಮುಂದಾಗಿರೋದು ಮಾತ್ರ ವಿಪರ್‍ಯಾಸವೇ ಸರಿ, ಇನ್ನೂ ಈ ಬಗ್ಗೆ ಪ್ರತಿರಿಯೆ ನೀಡಿರೋ ಅವರು ಈ ಹಿಂದೆ ನಡೆದ ಕಾಮಗಾರಿಗಳಿಗೆಲ್ಲ ನಾನು ಪೇಸ್ಟ್ ಮಾಟಮ್ ಮಾಡಲು ಹೋಗಲ್ಲ ಎನ್ನುವ ಮೂಲಕ ಹಿಂದಿನ ಮೈತ್ರಿ ಸರ್ಕಾರ ಕಾಮಗಾರಿಗಳನ್ನ ನಡೆಯಲು ಬಿಡಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಅಭಿವೃದ್ಧಿ ಕಾರ್ಯಗಳಿಗೆ ಪರಸ್ಪರ ಅಡ್ಡಗಾಲಾಕ್ಕುತ್ತಿರೋದು ಮಾತ್ರ ವಿಪರ್‍ಯಾಸವೇ ಸರಿ!Body:ಬೈಟ್ 1 : ಪ್ರೀತಂ ಜೆ. ಗೌಡ, ಶಾಸಕ.

ಬೈಟ್ 2 : ಎಚ್.ಡಿ. ರೇವಣ್ಣ, ಮಾಜಿ ಸಚಿವ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.