ETV Bharat / state

ರಾಜ್ಯವನ್ನು ಉತ್ತಮ ಪ್ರವಾಸಿ ಸ್ಥಳವನ್ನಾಗಿ ಮಾಡುವ ಯೋಜನೆ ಇದೆ: ಸಿ.ಟಿ.ರವಿ - make tourism places in karnataka

ಅತಿಥಿ ದೇವೋಭವ ಎನ್ನುವುದು ಭಾರತದ ಸಂಸ್ಕೃತಿ, ಅದನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು ಎಂದು ಸಿ.ಟಿ.ರವಿ ಅಭಿಪ್ರಾಯ ಪಟ್ಟಿದ್ದಾರೆ.

ಸಿ.ಟಿ.ರವಿ
author img

By

Published : Sep 4, 2019, 4:08 AM IST

ಹಾಸನ: ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರವಾಸೋದ್ಯಮದ ದೃಷ್ಠಿಯಿಂದ ಹಾಸನ ಜಿಲ್ಲೆ ಒಂದು ಮಹತ್ವ ಪೂರ್ಣವಾಗಿರುವ ಜಿಲ್ಲೆಯಾಗಿದ್ದು, ಜಗತ್ಪ್ರಸಿದ್ಧವಾಗಿರುವ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಒಳಗೊಂಡಂತೆ ಒಟ್ಟು 70 ಪ್ರವಾಸೋದ್ಯಮ ಕೇಂದ್ರಗಳು ಇಲ್ಲಿವೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದರು.

ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಜಿಲ್ಲೆಯ 53 ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದಕ್ಕೆ 56 ಕೋಟಿ ರೂ. ಅನುದಾನ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿ ಮಂಜೂರಾತಿ ದೊರಕಿದ್ದು, ಅದರಲ್ಲಿ 25 ಕೋಟಿ 69 ಲಕ್ಷ ರೂ ಹಣ ಬಿಡುಗಡೆಯಾಗಿದೆ. ಇನ್ನು 30 ಕೋಟಿ 35 ಲಕ್ಷ ರೂ ಅನುದಾನ ಬಾಕಿ ಇದೆ ಎಂದರು.

ಅತಿಥಿ ದೇವೋಭವ ಎನ್ನುವುದು ಭಾರತದ ಸಂಸ್ಕೃತಿ, ಅದನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು. ಪ್ರತಿ ರಾಜ್ಯವೂ ಕೂಡ ಒಂದಾದರೂ ಜಗತ್ತನ್ನು ಸೆಳೆಯುವ ರೀತಿಯಲ್ಲಿ ಪ್ರವಾಸಿ ಕೇಂದ್ರವನ್ನು ಮೊದಲ ಹಂತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕೆಂದು ಹೇಳಿದ್ದಾರೆ.

ಸಿ.ಟಿ.ರವಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೃಷ್ಠಿಯಿಂದ ಜಿಲ್ಲೆಯಲ್ಲಿ 267 ಗ್ರಾಮ ಪಂಚಾಯಿತಿಗಳು, ರಾಜ್ಯದಲ್ಲಿ 2,574 ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ ಉಪಗ್ರಾಮಗಳನ್ನು ಹೊರತುಪಡಿಸಿ ಜನವಸತಿ ಇರುವ ಗ್ರಾಮಗಳು 2,418, ನಿಮ್ಮ ಉರಿನ ಬಗ್ಗೆ ನಿಮಗೆಷ್ಟು ಗೊತ್ತು? ಎನ್ನುವ ಶೀರ್ಷಿಕೆಯಡಿಯಲ್ಲಿ ಗ್ರಾಮ ಮಾಹಿತಿಯನ್ನು ಸಂಗ್ರಹಿಸಿ ಗ್ರಾಮದ ಜನ ಜೀವನ, ಕಲೆ, ಸಂಸ್ಕೃತಿ, ಇತಿಹಾಸ, ಅಲ್ಲಿನ ಪ್ರಮುಖ ದೇವಾಲಯಗಳ ವಿಚಾರವನ್ನು ದಾಖಲಿಸುವ ಕೆಲಸ ಮಾಡುವ ಯೋಜನೆ ಮಾಡಲಾಗಿದೆ ಎಂದರು.

ಬೇರೆ ಬೇರೆ ದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದು ಅಲ್ಲಿನ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆ ನಿಟ್ಟಿನಲ್ಲಿ ಚಿಂತನೆ ಮಾಡಿರುವುದಾಗಿ ತಮ್ಮ ಸರಕಾರದ ಉದ್ದೇಶವನ್ನು ತಿಳಿಸಿದರು.

ಒಂದು ಭಾರಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಪ್ರವಾಸ ಮಾಡಿ, ಅಲ್ಲಿನ ಮಾಹಿತಿಯನ್ನು ಸಂಗ್ರಹಿಸಿದ ನಂತರ ರಾಜ್ಯವನ್ನು ಉತ್ತಮ ಪ್ರವಾಸಿ ಸ್ಥಳವನ್ನಾಗಿ ಮಾಡಲಾಗುವ ಯೋಜನೆ ಇದೆ ಎಂದರು.

ಹಾಸನ ಜಿಲ್ಲೆಯ ಪ್ರವಾಸಿ ಸ್ಥಳದಂತೆ, ಹಲ್ಮಡಿ ಗ್ರಾಮದ ಅಭಿವೃದ್ಧಿ ಬಗ್ಗೆಯೂ ಸಂಕಲ್ಪ ಇದ್ದು, ಯಾವ ಯಾವ ಹಂತದಲ್ಲಿ ಅಭಿವೃದ್ಧಿಗೊಳಿಸಬೇಕು ಎನ್ನುವುದು ನಿರ್ಧರಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಲೂರು ಇಂದಿಗೆ 900 ವರ್ಷಗಳು ಕಳೆದಿದೆ. ಎಲ್ಲರ ಸಲಹೆ ಪಡೆದು ಯೋಜನೆ ರೂಪಿಸಲಾಗುವುದು. ಹಾಸನಾಂಬ ಕಲಾಕ್ಷೇತ್ರ ಸಂಪೂರ್ಣ ಹಾಳಾಗಿದ್ದು, ಅಲ್ಲಿಗೆ ಕಾರ್ಯಕ್ರಮ ನಡೆಸಲು ಬಂದ ಕಲಾವಿದರು ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ. ಯಾವ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ಗಮನಕೊಡುವುದಾಗಿ ಭರವಸೆ ನೀಡಿದರು.

Intro:ಹಾಸನ: ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರವಾಸೋದ್ಯಮದ ದೃಷ್ಠಿಯಿಂದ ಹಾಸನ ಜಿಲ್ಲೆ ಒಂದು ಮಹತ್ವಪೂರ್ಣವಾಗಿರುವ ಜಿಲ್ಲೆಯಾಗಿದ್ದು, ಜಗತ್ತು ಪ್ರಸಿದ್ಧವಾಗಿರುವ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಒಳಗೊಂಡಂತೆ ಒಟ್ಟು ೭೦ ಪ್ರವಾಸೋದ್ಯಮ ಕೇಂದ್ರಗಳಿವೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದರು.
Body:ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ೫ ವರ್ಷಗಳಲ್ಲಿ ಜಿಲ್ಲೆಯ ೫೩ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದಕ್ಕೆ ೫೬ ಕೋಟಿ ಅನುದಾನ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿ ಮಂಜುರಾತಿ ದೊರಕಿದ್ದು, ಅದರಲ್ಲಿ ೨೫ ಕೋಟಿ ೬೯ ಲಕ್ಷ ರೂ ಹಣ ಬಿಡುಗಡೆಯಾಗಿದೆ. ಇನ್ನು ೩೦ ಕೋಟಿ ೩೫ ಲಕ್ಷ ರೂ ಅನುದಾನ ಬಾಕಿ ಇದೆ ಎಂದರು.
ಕೇಂದ್ರ ಪುರತತ್ವ ಇಲಾಖೆಯ ಮೂರು ಕಾಮಗಾರಿಗಳಲ್ಲಿ ಎರಡು ಕಾಮಗಾರಿ ಶ್ರವಣಬೆಳಗೊಳ ಮತ್ತು ಬೇಲೂರಿಗೆ ೯ ಕೋಟಿ ೪೦ ಲಕ್ಷ ರೂ.ಗಳ ಹಣ ಮಂಜುರಾತಿ ದೊರಕಿದೆ. ಜೊತೆಗೆ ಯಗಚಿ ಬ್ಯಾಕ್ ವಾಟರ್ ಸಮೀಪ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ೨೦ ಕೋಟಿ ರೂ. ವೆಚ್ಚದಲ್ಲಿ ತ್ರಿಸ್ಟಾರ್ ಹೋಟೇಲ್ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದ್ದು, ಟೆಂಡರ್ ಕರೆದು ಏಜೆನ್ಸಿಯನ್ನು ಫಿಕ್ಸ್ ಮಾಡಲಾಗಿದೆ. ಕಾಮಗಾರಿ ಪ್ರಾರಂಭವಾಗುವುದು ಬಾಕಿ ಇದೆ. ಅತಿಥಿ ದೇವೋಭವ ಎನ್ನುವುದು ಭಾರತದ ಸಂಸ್ಕೃತಿ, ಅದನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು. ಪ್ರತಿ ರಾಜ್ಯವೂ ಕೂಡ ಒಂದಾದರೂ ಜಗತ್ತನ್ನು ಸೆಳೆಯುವ ರೀತಿಯಲ್ಲಿ ಪ್ರವಾಸಿ ಕೇಂದ್ರವನ್ನು ಮೊದಲ ಹಂತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕೆಂದು ಹೇಳಿದ್ದಾರೆ.
ಪ್ರತಿ ರಾಜ್ಯದಲ್ಲಿ ಕನಿಷ್ಟ ೨೦ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ, ಮೂಲ ಸೌಕರ್ಯಗಳಾದ ರಸ್ತೆ, ಅತಿಥಿಗೃಹ, ಶೌಚಾಲಯ, ಸ್ಥಳದ ಮಾಹಿತಿಯನ್ನು ಕೊಡುವ ವ್ಯವಸ್ಥೆ ಇತರೆಯನು ಮಾಡುವ ಮಾತನ್ನು ಪ್ರಧಾನಿಯವರು ಮಾತನಾಡಿದ್ದಾರೆ. ಪ್ರತಿ ಭಾರತೀಯರು ವರ್ಷಕ್ಕೆ ೫ ಸ್ಥಳಗಳಿಗೆ ಭೇಟಿ ಕೊಟ್ಟಾಗ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಜೊತೆಗೆ ಉದ್ಯೋಗ ಸೃಷ್ಠಿಯಾಗುತ್ತದೆ.
ರಾಜ್ಯದಲ್ಲಿ ೩೧೯ ಪ್ರವಾಸೋದ್ಯಮ ಸ್ಥಳಗಳನ್ನು ಗುರುತಿಸಲಾಗಿದೆ. ೮೪೪ ಪುರಾತತ್ವ ಇಲಾಖೆಗಳಿಗೆ ಸೇರಿದ ಜಾಗಗಳನ್ನು ಗುರುತಿಸಲಾಗಿದೆ. ೪೧ ಪ್ರವಾಸಿ ವರ್ತುಲಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಪೂಟದ ಮುಂದಿಟ್ಟು, ಕೆಲವನ್ನು ಖಾಸಗಿಯ ಸಹಭಾಗಿತ್ವದಲ್ಲಿ, ಕೆಲವನ್ನು ನೇರವಾಗಿ ಸರಕಾರವೇ ಅಭಿವೃದ್ಧಿ ಮಾಡಿಸುವ ಕೆಲಸ ಮಾಡಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೃಷ್ಠಿಯಿಂದ ಜಿಲ್ಲೆಯಲ್ಲಿ ೨೬೭ ಗ್ರಾಮ ಪಂಚಾಯಿತಿಗಳು, ರಾಜ್ಯದಲ್ಲಿ ೨೫೭೪ ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ ಉಪಗ್ರಾಮಗಳನ್ನು ವರತುಪಡಿಸಿ ಜನವಸತಿ ಇರುವ ಗ್ರಾಮಗಳು ೨೪೧೮, ನಿಮ್ಮ ಉರಿನ ಬಗ್ಗೆ ನಿಮಗೆಷ್ಟು ಗೊತ್ತು? ಎನ್ನುವ ಶೀರ್ಷಿಕೆಯಡಿಯಲ್ಲಿ ಗ್ರಾಮ ಮಾಹಿತಿಯನ್ನು ಸಂಗ್ರಹಿಸಿ ಗ್ರಾಮದ ಜನ ಜೀವನ, ಕಲೆ, ಸಂಸ್ಕೃತಿ, ಇತಿಹಾಸ, ಅಲ್ಲಿನ ಪ್ರಮುಖ ದೇವಾಲಯಗಳ ವಿಚಾರವನ್ನು ದಾಖಲಿಸುವ ಕೆಲಸ ಮಾಡುವ ಯೋಜನೆ ಮಾಡಲಾಗಿದೆ ಎಂದರು. ಇತಿಹಾಸದ ಮತ್ತು ಸಮಾಜ ಶಾಸ್ತ್ರದ ವಿದ್ಯಾರ್ಥಿಗಳು, ಕನ್ನಡ ಮಾಧ್ಯಮ ಭಾಷೆ ಅಧ್ಯಾಯನ ಮಾಡುತ್ತಿರುವವರ ಸಹಕಾರ ಪಡೆದು ದಾಖಲೆ ಕೆಲಸ ಮಾಡಲಾಗುವುದುಎಂದರು.
ಯಗಚಿ ಮತ್ತು ಗೊರೂರು ಎರಡು ಕಡೆಯಲ್ಲೂ ಬೃಂದಾವನ ಮಾಡುವ ಬಗ್ಗೆ ಪ್ರಸ್ತಾಪ ಬಂದಿದ್ದು, ಎಲ್ಲಾ ಜಿಲ್ಲೆಗಳ ಮಾಹಿತಿ ಸಂಗ್ರಹಿಸಿದ ನಂತರ ಮುಖ್ಯಮಂತ್ರಿಗಳ ಅನುಮತಿ ಪಡೆದು ಪ್ರವಾಸೋದ್ಯಮಕ್ಕೆ ಖಾಸಗಿ ಮತ್ತು ಸರಕಾರಿ ಸಹಯೋಗದಲ್ಲಿ ಮಾಡುವ ಸಂಕಲ್ಪ ಹೊಂದಿರುವುದಾಗಿ ಹೇಳಿದರು.
ಬೇರೆ ಬೇರೆ ದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದು ಅಲ್ಲಿನ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿಯಂತೆ ಆ ನಿಟ್ಟಿನಲ್ಲಿ ಚಿಂತನೆ ಮಾಡಿರುವುದಾಗಿ ತಮ್ಮ ಸರಕಾರದ ಉದ್ದೇಶವನ್ನು ತಿಳಿಸಿದರು.
ಒಂದು ಭಾರಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಪ್ರವಾಸ ಮಾಡಿ, ಅಲ್ಲಿನ ಮಾಹಿತಿಯನ್ನು ಸಂಗ್ರಹಿಸಿದ ನಂತರ ರಾಜ್ಯವನ್ನು ಉತ್ತಮ ಪ್ರವಾಸಿ ಸ್ಥಳವನ್ನಾಗಿ ಮಾಡಲಾಗುವ ಯೋಜನೆ ಇದೆ ಎಂದರು.
ಹಾಸನ ಜಿಲ್ಲೆಯ ಪ್ರವಾಸಿ ಸ್ಥಳದಂತೆ ಹಲ್ಮಡಿ ಗ್ರಾಮದ ಅಭಿವೃದ್ಧಿ ಬಗ್ಗೆಯೂ ಸಂಕಲ್ಪ ಇದ್ದು, ಯಾವ ಯಾವ ಹಂತದಲ್ಲೀ ಅಭಿವೃದ್ಧಿಗೊಳಿಸಬೇಕು ಎನ್ನುವುದು ನಿರ್ಧರಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬೇಲೂರು ಇಂದಿಗೆ ೯೦೦ ವರ್ಷಗಳು ಕಳೆದಿದೆ. ಎಲ್ಲಾರ ಸಲಹೆ ಪಡೆದು ಯೋಜನೆ ರೂಪಿಸಲಾಗುವುದು. ಹಾಸನಾಂಬ ಕಲಾಕ್ಷೇತ್ರ ಸಂಪೂರ್ಣ ಹಾಳಾಗಿದ್ದು, ಅಲ್ಲಿಗೆ ಕಾರ್ಯಕ್ರಮ ನಡೆಸಲು ಬಂದ ಕಲಾವಿದರು ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ. ಯಾವ ಮೂಲಭೂತ ಸೌಕರ್ಯಗಳಿಲ್ಲ ಬಗ್ಗೆ ಗಮನಕೊಡುವುದಾಗಿ ಭರವಸೆ ನುಡಿದರು.
Conclusion:ಬೇಲೂರು ಕ್ಷೇತ್ರದ ಶಾಸಕ ಕೆ.ಎಂ. ಲಿಂಗೇಶ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜು, ಜಿಲ್ಲಾಧಿಕಾರಿ ಗಿರೀಶ್ ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ,ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.