ಹಾಸನ : ಲಾಕ್ಡೌನ್ ಆದೇಶವಿದ್ರೂ ಕೂಡ ಅನೇಕರು ನಗರದ ಹಲವೆಡೆ ಓಡಾಡುತ್ತಿದ್ದವರ ವಾಹನಗಳ ನಗರದ ಬಡಾವಣೆ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.
ಇಂದು ಎಂಟು ಗಂಟೆವರೆಗೆ ಮಾತ್ರ ಹಾಲು ಖರೀದಿಸಲು ಅವಕಾಶ ನೀಡಲಾಗಿತ್ತು. ವಾರದಲ್ಲಿ ನಾಲ್ಕು ದಿನ 12 ಗಂಟೆವರೆಗೆ ಅಗತ್ಯ ವಸ್ತು ಖರೀದಿಸಲು ಮತ್ತು ವಾರದ ಏಳೂ ದಿನ ಹಾಲು ಖರೀದಿಸಲು ಅವಕಾಶ ನೀಡಲಾಗಿದ್ದರೂ ಸಹ ಪೊಲೀಸರ ನಿಯಮಕ್ಕೆ ಕ್ಯಾರೆ ಎನ್ನದ ಜನರಿಗೆ ವಾರ್ನಿಂಗ್ ಕೂಡ ನೀಡಲಾಗಿತ್ತು. ಎಚ್ಚರಿಕೆ ನೀಡಿದ್ರೂ ಕೂಡ ನಗರದಲ್ಲಿ ಸುಖಾಸುಮ್ಮನೆ ಓಡಾಡುತ್ತಿದ್ದವರ ವಾಹನಗಳನ್ನ ಸೀಜ್ ಮಾಡಲಾಗಿದೆ.
ದೂರದ ಊರಿನಿಂದ ಬರುವವರ ವಾಹನ ಸವಾರರ ಮೇಲೆ ಹೆಚ್ಚು ಕಣ್ಣಿಟ್ಟು ತಪಾಸಣೆ ನಡೆಸಲಾಗ್ತಿದೆ.