ಹಾಸನ: ಸ್ಪೀಡ್ ಬ್ರೇಕರ್ ಮೇಲೆ ಜಂಪ್ ಆದ ಹಿನ್ನೆಲೆ ಬಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಡಿಕೇರಿಯಿಂದ ಹಾಸನ ಮಾರ್ಗವಾಗಿ ಹುಬ್ಬಳಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಗರದ ಹೊಸ ನಿಲ್ದಾಣದಲ್ಲಿ ಅತೀ ವೇಗ ನಿಯಂತ್ರಕದ ಮೇಲೆ ವೇಗವಾಗಿ ಬಸ್ ಹೋಗಿದ್ದು, ಗರ್ಭಿಣಿ ಸಬೀನಾಗೆ ಇದರಿಂದ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿದ್ದಾರೆ. ಬಸ್ನಿಂದ ತುರ್ತು ವಾಹನಕ್ಕೆ ಗರ್ಭಿಣಿಯನ್ನು ವರ್ಗಾಯಿಸಬೇಕಿತ್ತು.
ತೀವ್ರ ನೋವಿನಿಂದ ಬಳಲುತ್ತಿದ್ದ ಸಬೀನಾ ಬಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗರ್ಭಿಣಿ ಹಾಗೂ ತಾಯಿ ರುಬೀನಾ ಅರಸೀಕೆರೆಗೆ ಹೊರಟಿದ್ದರು. ವೇಗವಾಗಿ ಬಸ್ ಚಲಾಯಿಸಿದ ಚಾಲಕನ ನಿರ್ಲಕ್ಷ್ಯದಿಂದ ಇಂಥದ್ದೊಂದು ಘಟನೆ ಸಂಭವಿಸಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.