ಹಾಸನ: ಕೋವಿಡ್ ಎರಡನೇ ಅಲೆಗೆ ಪ್ರತಿಯೊಂದು ಕ್ಷೇತ್ರಗಳೂ ತತ್ತರಿಸಿ ಹೋಗಿವೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಪ್ಯಾಕೇಜ್ ಘೋಷಿಸಿರುವ ಸರ್ಕಾರ, ಕ್ಯಾಮರಾಮನ್ಗಳನ್ನು ಮಾತ್ರ ಮರೆತುಬಿಟ್ಟಿದೆ. ಈ ಮಧ್ಯೆ ಕೋವಿಡ್ ನಿರ್ವಹಣೆಗೆ ಹಾಸನ ಜಿಲ್ಲಾಧಿಕಾರಿ ಇನ್ನೂ ಒಂದು ವಾರ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಸಾಲಶೂಲ ಮಾಡಿ ಸ್ಟುಡಿಯೋ ಇಟ್ಟುಕೊಂಡಿರುವವರಿಗೆ ಕೋವಿಡ್ ದೊಡ್ಡ ಹೊಡೆತ ನೀಡಿದೆ. ಕೊರೊನಾ ಬಂದಾಗಿನಿಂದ ಸ್ಟುಡಿಯೋಗಳನ್ನು ಮುಚ್ಚಲಾಗಿದೆ. ಈ ಸಮಯದಲ್ಲಿ ಅವರು ಬದುಕಿನ ಬಂಡಿ ಸಾಗಿಸಲು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ.
ಒಂದೆಡೆ ಉದ್ಯಮಕ್ಕೆ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರಂತೆ. ಮತ್ತೊಂದೆಡೆ ಕೈ ಸಾಲದಿಂದ ಮನೆ ಬಾಡಿಗೆ ಕಟ್ಟಿ ಕಂಗಾಲಾಗಿರುವ ಇವರಿಗೆ ಈಗ ಸರ್ಕಾರದ ನೆರವಿನ ಅವಶ್ಯಕತೆ ಇದೆ. ಮದುವೆ ಸಮಾರಂಭಗಳಿಗೆ ಹೆಚ್ಚಿನ ಜನ ಸೇರುವಂತಿಲ್ಲ. ಆದ್ದರಿಂದ ಕಾರ್ಯಕ್ರಮಗಳಿಗೆ ಛಾಯಾಗ್ರಾಹಕರನ್ನು ಕರೆಸೋದು ಸಹ ತೀರಾ ಕಡಿಮೆಯಾಗಿದೆ.
ಇದನ್ನೂ ಓದಿ:ರಾಜ್ಯಕ್ಕೆ ಬರ್ತಿದ್ದಾರೆ ಸುರ್ಜೆವಾಲಾ: 'ಕೈ' ನಾಯಕರ ಬಾಯಿಗೆ ಬೀಳುತ್ತಾ ಬೀಗ?
ಸರ್ಕಾರ ಈಗಲಾದರೂ ಗಮನಹರಿಸಿ ಕ್ಯಾಮೆರಾ ಹಿಂದೆ ನಿಂತಿರುವ ಇವರುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ರೆ ಮಾತ್ರ ಇವರ ಬದುಕು ಕ್ಲಿಕ್ ಆಗುತ್ತದೆ.