ಹಾಸನ: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಕಲ್ಪಿಸಿರುವ ಸವಲತ್ತುಗಳು ಎಲ್ಲರಿಗೂ ತಲುಪಬೇಕೆಂದರೆ ಪ್ರಸ್ತುತ ದಿನಕ್ಕೆ ಕೆಲ ತಿದ್ದುಪಡಿ ಅನಿವಾರ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸ್ವಾತಂತ್ರ್ಯ ಗಳಿಸಿ 7 ದಶಕ ಕಳೆದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ಆದ್ದರಿಂದ ಕೆಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಸರ್ವರಿಗೂ ಸಮಬಾಳು ಸಮಪಾಲು ಕನಸು ಸಾಕಾರಗೊಳಿಸಬೇಕಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕರೂಪದ ಶಿಕ್ಷಣ ಜಾರಿಯಾಗಬೇಕು. ಈ ದೇಶ ಕಾಲಕ್ಕೆ ತಕ್ಕಂತೆ ಸಂವಿಧಾನವನ್ನು ಬರೆಯುವ ಪ್ರಯತ್ನ ಮಾಡುವುದಾದರೆ ಇದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಪ್ರಯತ್ನ ಮಾಡಬೇಕು ಎಂದು ಕೋರಿದರು.
ಓದಿ: ಹಿಂದಿ ಹೇರಿಕೆ ಸಮರ್ಥಿಸಿ ಹೇಳಿಕೆ : ಸಾಹಿತಿ ದೊಡ್ಡರಂಗೇಗೌಡರಿಂದ ಕ್ಷಮೆಯಾಚನೆ