ETV Bharat / state

ಸಕಲೇಶಪುರದ ಮೂಗಲಿ ಗ್ರಾಮದ ಸೀಲ್‌ಡೌನ್ ತೆರವು - ಸಕಲೇಶಪುರ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ತಾಲೂಕು ಆಡಳಿತ ಸುದ್ದಿ

ಗ್ರಾಮಕ್ಕೆ ಯಾರೂ ಕೂಡ ಹೊರಗಿನಿಂದ ಬರುವಂತಿರಲಿಲ್ಲ ಹಾಗೂ ಒಳಗಿನಿಂದ ಹೊರ ಹೋಗುವಂತಿರಲಿಲ್ಲ. ಬೆಳಗೋಡು ಗ್ರಾಮ ಪಂಚಾಯತ್‌ ವತಿಯಿಂದ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು..

ಮೂಗಲಿ ಗ್ರಾಮದಲ್ಲಿ ಸೀಲ್ ಡೌನ್ ತೆರವು
ಮೂಗಲಿ ಗ್ರಾಮದಲ್ಲಿ ಸೀಲ್ ಡೌನ್ ತೆರವು
author img

By

Published : Jul 17, 2020, 2:39 PM IST

ಸಕಲೇಶಪುರ : ಕೊರೊನಾ ಪ್ರಕರಣ ಹಿನ್ನೆಲೆ ಸೀಲ್‌ಡೌನ್ ಆಗಿದ್ದ ತಾಲೂಕಿನ ಮೂಗಲಿ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಸೀಲ್‌ಡೌನ್ ತೆರವುಗೊಳಿಸಲಾಯಿತು.

ಹಸಿರು ವಲಯವಾಗಿದ್ದ ತಾಲೂಕಿನಲ್ಲಿ ಬೆಳಗೋಡು ಹೋಬಳಿ ಮೂಗಲಿ ಗ್ರಾಮದ ವೃದ್ಧೆಯೋರ್ವರಿಗೆ ಕೊರೊನಾ ಸೋಂಕು ತಗಲಿತ್ತು. ಈ ಹಿನ್ನೆಲೆ ತಾಲೂಕು ಆಡಳಿತ ಗ್ರಾಮವನ್ನು 14 ದಿನಗಳವರೆಗೆ ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿ ಸೀಲ್‌ಡೌನ್ ಮಾಡಿತ್ತು.

ಮೂಗಲಿ ಗ್ರಾಮದಲ್ಲಿ ಸೀಲ್‌ಡೌನ್ ತೆರವು

ಆ ಸಮಯದಲ್ಲಿ ಗ್ರಾಮಕ್ಕೆ ಯಾರೂ ಕೂಡ ಹೊರಗಿನಿಂದ ಬರುವಂತಿರಲಿಲ್ಲ ಹಾಗೂ ಒಳಗಿನಿಂದ ಹೊರ ಹೋಗುವಂತಿರಲಿಲ್ಲ. ಬೆಳಗೋಡು ಗ್ರಾಮ ಪಂಚಾಯತ್‌ ವತಿಯಿಂದ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಜಿ ಆರ್ ಹರೀಶ್ ನೇತೃತ್ವದಲ್ಲಿ ಗ್ರಾಮದ ಬೀದಿಗಳಿಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಮೂಲಕ ಜನರ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಅವರು, 105 ದಿನಗಳವರೆಗೂ ಸಕಲೇಶಪುರ ಕೊರೊನಾ ಮುಕ್ತವಾಗಿತ್ತು. ಆದರೆ, ಈ ಗ್ರಾಮದ 75ವರ್ಷದ ವೃದ್ಧೆಯೊಬ್ಬರಿಗೆ ಕೊರೊನಾ ತಗಲುವ ಮೂಲಕ ತಾಲೂಕಿಗೆ ಕಾಲಿಟ್ಟಿತ್ತು. ನಂತರ ವೃದ್ಧೆಯ ಮಗನಿಗೂ ಕೊರೊನಾ ಕಂಡು ಬಂದಿತ್ತು. ಸಾರ್ವಜನಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪಾಸಿಟಿವ್ ಕೇಸ್ ಬಂದ ವ್ಯಕ್ತಿ ಹಾಗೂ ವೃದ್ಧೆಯ ಪ್ರಾಥಮಿಕ ಸಂರ್ಪಕದಲ್ಲಿದ್ದ ಮತ್ತೊಬ್ಬರು ಮಾತ್ರ ಇನ್ನು 14 ದಿನಗಳವರೆಗೂ ಹೋಂ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಈ ಗ್ರಾಮದ ಜನರು ಇನ್ನೂ ಮುಂದೆ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ, 14 ದಿನಗಳವರೆಗೂ ಕೂಲಿ ಇಲ್ಲದೆ ಕಷ್ಟದ ಸಮಯ ಕಳೆದಿದ್ದೇವೆ. ಸರ್ಕಾರ ಈ ರೀತಿಯ ಪ್ರದೇಶಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ತಾಪಂ ಸದಸ್ಯ ಎಡೇಹಳ್ಳಿ ಆರ್ ಮಂಜುನಾಥ್, ಗ್ರಾಮದವರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದರು. ಸೀಲ್‌ಡೌನ್ ತೆರವುಗೊಳಿಸುವ ವೇಳೆ ತಾಲೂಕು ವೈದ್ಯಾಧಿಕಾರಿ ಮಹೇಶ್, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ತಾಲೂಕು ಅಧಿಕಾರಿ ದಿಲೀಪ್, ರಾಜಸ್ವ ನಿರೀಕ್ಷಕ ಜರ್ನಾಧನ್, ಪಿಡಿಒ ಸಂಜಯ್, ಗ್ರಾಪಂ ಕಾರ್ಯದರ್ಶಿ ರಾಜಪ್ಪ ಇನ್ನಿತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.