ETV Bharat / state

ಕಸ ಸುರಿಯೋಕೆ ಬಂದೋರು, ಬಂದ ದಾರಿಗೆ ಸುಂಕವಿಲ್ಲದಂತೆ ಹೋದ್ರು..! - ಕಸ ವಿಲೇವಾರಿ ಘಟಕ

ಪಟ್ಟಣದ ತ್ಯಾಜ್ಯವನ್ನು ಮಳಲಿ ಗ್ರಾಮದ ಕಸ ವಿಲೇವಾರಿ ಘಟಕಕ್ಕೆ ಸುರಿಯಲು ಮುಂದಾಗಿದ್ದ ಪುರಸಭೆ ವಿರುದ್ಧ ಮಳಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಕಸ ಸುರಿಯುವುದನ್ನು ತಡೆಯಲು ಯಶಸ್ವಿಯಾಗಿದ್ದಾರೆ.

Taluk administration
ಬಗೆಹರಿಯದ ಕಸದ ಸಮಸ್ಯೆ: ಮಳಲಿ ಗ್ರಾಮಸ್ಥರು ಹಾಗೂ ತಾಲೂಕು ಆಡಳಿತದ ಜೊತೆಗೆ ಮಾತಿನ ಚಕಮುಖಿ
author img

By

Published : May 17, 2020, 10:19 PM IST

ಸಕಲೇಶಪುರ: ಕಸ ವಿಲೇವಾರಿ ಘಟಕದಲ್ಲಿ ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಕುರಿತು ತಾಲೂಕು ಆಡಳಿತ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಪಟ್ಟಣದ ಮಳಲಿ ಗ್ರಾಮದಲ್ಲಿ ನಡೆದಿದೆ.

ಪಟ್ಟಣದ ಜಾತ್ರೆ ಮೈದಾನದ ಸಮೀಪ ಹಾಕಲಾಗಿದ್ದ ತ್ಯಾಜ್ಯವನ್ನು ಮಳಲಿ ಗ್ರಾಮದ ಕಸ ವಿಲೇವಾರಿ ಘಟಕಕ್ಕೆ ಸುಮಾರು 4 ಟಿಪ್ಪರ್​ಗಳಲ್ಲಿ ಹಾಕಲು ಪುರಸಭೆ ಮುಂದಾಗಿತ್ತು. ಈ ವೇಳೆ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಬಂದ ಮಳಲಿ ಗ್ರಾಮಸ್ಥರು ಕಸವನ್ನು ಹಾಕುವುದಕ್ಕೆ ವಿರೋಧಿಸಿದರು. ಇದರಿಂದಾಗಿ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಆಗಮಿಸಿದ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ ಸ್ಟೀವನ್ ಪ್ರಕಾಶ್ ಗ್ರಾಮಸ್ಥರಿಗೆ ಕಸ ಹಾಕಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಗ್ರಾಮಸ್ಥರು ಒಪ್ಪಲಿಲ್ಲ.

ಇದರಿಂದಾಗಿ ಕೆಲ ಕಾಲ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕಸವನ್ನು ಹಿಂತೆಗೆದುಕೊಂಡು ಜಾತ್ರೆ ಮೈದಾನದಲ್ಲೇ ಸುರಿಯಲಾಯಿತು. ಇದರೊಂದಿಗೆ ಪಟ್ಟಣದ ಕಸ ವಿಲೇವಾರಿ ಸಮಸ್ಯೆ ಬಗೆಹರಿಯುವುದು ಸದ್ಯಕ್ಕೆ ಅನುಮಾನವಾಗಿದೆ.

ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸುರಿಯುವುದು ಸರಿಯಲ್ಲ. ಇಲ್ಲಿಯೆ ಏಕೆ ಕಸ ವಿಲೇವಾರಿ ಘಟಕ ಮಾಡಬೇಕು. ಈಗಾಗಲೇ ನ್ಯಾಯಾಲಯ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ನಂತರ ಕಸ ಸುರಿಯಬಹುದೆಂದು ಹೇಳಿದ್ದು ಆದ್ದರಿಂದ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರೆಗೂ ಕಸ ವಿಲೇವಾರಿ ಮಾಡಲು ಬಿಡುವುದಿಲ್ಲ. ಇಲ್ಲಿ ಕೇವಲ ದಲಿತ ಕುಟುಂಬಗಳೆ ಇದ್ದು ದಲಿತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಗ್ರಾಮದ ಮುಖಂಡ ಮಳಲಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಂಜುನಾಥ್ ಗ್ರಾಮಸ್ಥರೊಂದಿಗೆ ಮತ್ತೊಂದು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.