ETV Bharat / state

ಬೈಕ್​ಗೆ ಕಾರು ಡಿಕ್ಕಿಯಾಗಿ ಸರ್ವೆಯರ್ ಸಾವು : CCTVಯಲ್ಲಿ ಭಯಾನಕ ದೃಶ್ಯ ಸೆರೆ - Aluru Accident

ನಿನ್ನೆ ಹಾಸನದ ಆಲೂರು ಬಳಿ ಬಳಿ ನಡೆದ ಅಪಘಾತದಲ್ಲಿ ಸರ್ವೆಯರ್ ಮೃತಪಟ್ಟಿದ್ದು, ಭೀಕರ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

Accident in Aluru Hassan
ಅಪಘಾತದ ಸಿಸಿಟಿವಿ ದೃಶ್ಯ
author img

By

Published : Aug 14, 2021, 10:08 AM IST

Updated : Aug 14, 2021, 10:31 AM IST

ಆಲೂರು ( ಹಾಸನ) ಅತಿ ವೇಗವಾಗಿ ಬಂದ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಸನ ಜಿಲ್ಲೆ ಕಸಬಾ ಆಲೂರು-ಭೈರಾಪುರ ರಸ್ತೆಯಲ್ಲಿ ನಿನ್ನೆ ಅಪಘಾತ ನಡೆದಿದೆ. ಘಟನೆಯಲ್ಲಿ, ಸರ್ವೆ ಕಾರ್ಯ ಮುಗಿಸಿಕೊಂಡು ಬೈಕ್​ನಲ್ಲಿ ಆಲೂರಿನ ಕಚೇರಿಗೆ ತೆರಳುತ್ತಿದ್ದ ಸರ್ವೆಯರ್ ಮಂಜುನಾಥ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಅಪಘಾತದ ಸಿಸಿಟಿವಿ ದೃಶ್ಯ

ಓದಿ : ಬೆಂಗಳೂರು ಪೊಲೀಸರ ಮೇಲೆ ರೌಡಿಶೀಟರ್ ಹಲ್ಲೆ: ಪ್ರಮುಖ ಆರೋಪಿ ಅರೆಸ್ಟ್

ಕಾರು ಚಾಲಕ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿಕೊಂಡು ಬಂದು ಮಂಜುನಾಥ್ ಅವರ ಬೈಕ್ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗ್ತಿದೆ. ಅಪಘಾತ ನಡೆಯಲು ಕಾರು ಚಾಲಕನೇ ಕಾರಣ ಎಂಬುದು ಸಿಸಿಟಿವಿ ದೃಶ್ಯದಿಂದ ಸ್ಪಷ್ಟವಾಗಿದೆ. ಹಾಗಾಗಿ, ಕಾರು ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೃತ ಸರ್ವೆಯರ್ ಮಂಜುನಾಥ್, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಾಲೂಕು ತಹಶೀಲ್ದಾರ್ ಶಿರಿನ್ ತಾಜ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

Last Updated : Aug 14, 2021, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.